ಉಡುಪಿ: ವೈದ್ಯರಲ್ಲಿ ಚಿಕಿತ್ಸೆಗೆ ಹೋದ ಯುವಕ ನಾಪತ್ತೆ
Update: 2023-05-10 20:40 IST
ಉಡುಪಿ, ಮೇ 10: ವೈದ್ಯರಲ್ಲಿ ಚಿಕಿತ್ಸೆ ಹೋದ ಯುವಕನೋರ್ವ ಆಸ್ಪತ್ರೆ ಯಿಂದಲೇ ನಾಪತ್ತೆಯಾಗಿರುವ ಘಟನೆ ಉಡುಪಿಯಲ್ಲಿ ಮೇ 8ರಂದು ಅಪರಾಹ್ನ ವೇಳೆ ನಡೆದಿದೆ.
ನಾಪತ್ತೆಯಾದವರನ್ನು ಮುಹಮ್ಮದ್ ಅನಾಸ್ ಹೈದರ್ (18) ಎಂದು ಗುರುತಿಸಲಾಗಿದೆ.
ಪಿಯುಸಿ ಶಿಕ್ಷಣ ಮುಗಿಸಿ ಉಡುಪಿಯಲ್ಲಿ ಕಂಪ್ಯೂಟರ್ ಕ್ಲಾಸಿಗೆ ಹೋಗುತ್ತಿದ್ದ ಇವರು, ಮಾನಸಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಮನೆಯವರೊಂದಿಗೆ ಉಡುಪಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದರು. ವೈದ್ಯರ ಕೊಠಡಿಯ ಹೊರಗಡೆ ಕೂತಿದ್ದ ಅನಾಸ್ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.