ಮಣಿಪಾಲ: ಬಾವಿಗೆ ಬಿದ್ದ ಬೆಕ್ಕನ್ನು ಮೇಲಕ್ಕೆತ್ತಿದ್ದ ವ್ಯಕ್ತಿ ಬಾವಿಗೆ ಬಿದ್ದು ಮೃತ್ಯು
Update: 2023-05-10 20:42 IST
ಮಣಿಪಾಲ, ಮೇ 10: ಬಾವಿಗೆ ಬಿದ್ದ ಬೆಕ್ಕನ್ನು ಮೇಲಕ್ಕೆತ್ತಲು ಬಾವಿಗೆ ಇಳಿದ ವ್ಯಕ್ತಿಯೊಬ್ಬರು ಕೈತಪ್ಪಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಮೇ 9ರಂದು ಮಧ್ಯಾಹ್ನ ವೇಳೆ ಮಣಿಪಾಲದ ವಿದ್ಯಾರತ್ನ ನಗರ ಎಂಬಲ್ಲಿ ನಡೆದಿದೆ.
ಮೃತರನ್ನು ಮಂಗಳೂರು ಮೂಡುಶೆಡ್ಡೆ ಶಿವ ನಗರದ ಸ್ವಾಮಿನಾಥ್ (54) ಎಂದು ಗುರುತಿಸಲಾಗಿದೆ. ಇವರು ಭವಾನಿ ಶಂಕರ ರಾವ್ ಎಂಬವರ ಬಾವಿಗೆ ಬಿದ್ದ ಬೆಕ್ಕನ್ನು ಮೇಲಕ್ಕೆ ತರಲು ಬಾವಿಗೆ ಇಳಿದಿದ್ದು, ಅಲ್ಲಿಂದ ಬೆಕ್ಕನ್ನು ಮೇಲಕ್ಕೆ ಕೊಟ್ಟು ಬಳಿಕ ಹಗ್ಗದ ಸಹಾಯದಿಂದ ಬಾವಿಯಿಂದ ಮೇಲಕ್ಕೆ ಬರುವಾಗ ಆಕಸ್ಮಿಕವಾಗಿ ಕೈತಪ್ಪಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.