×
Ad

ಮಂಗಳೂರು: ಕಾಂಗ್ರೆಸ್ - ಜೆಡಿಎಸ್ ಕಾರ್ಯಕರ್ತರ ಮಧ್ಯೆ ಹೊಡೆದಾಟ; ಪ್ರಕರಣ ದಾಖಲು

Update: 2023-05-10 21:01 IST

ಮಂಗಳೂರು: ಹಣ ಹಂಚಿಕೆ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಮಧ್ಯೆ ಹೊಡೆದಾಟ ನಡೆದಿರುವುದಾಗಿ ಕಾವೂರು ಪೊಲೀಸರು ತಿಳಿಸಿದ್ದು, ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳವಾರ ರಾತ್ರಿ 10:30ಕ್ಕೆ ಕುಂಜತ್ತಬೈಲ್ ಪರಿಸರದಲ್ಲಿ ಹಣ ಹಂಚುತ್ತಿರುವ ಬಗ್ಗೆ ಎರಡೂ ಪಕ್ಷದವರು ಪರಸ್ಪರ ಪ್ರಶ್ನಿಸಿದ್ದು, ಬಳಿಕ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ  ಬಗ್ಗೆ ಜೆಡಿಎಸ್‌ನ ಸಂಶಾದ್ ಮತ್ತು ಕಾಂಗ್ರೆಸ್‌ನ ಕವಿತಾ ಸನಿಲ್ ನೀಡಿದ ದೂರಿನಂತೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News