×
Ad

ಪಾಕಿಸ್ತಾನ: 945 ಮಂದಿಯ ಬಂಧನ

Update: 2023-05-10 23:11 IST

ಲಾಹೋರ್, ಮೇ 10: ಮಾಜಿ ಪ್ರಧಾನಿ ಇಮ್ರಾನ್ ಬಂಧನದ ಬಳಿಕ ಭುಗಿಲೆದ್ದ ಪ್ರತಿಭಟನೆ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿ ದೇಶದ ಅತ್ಯಂತ ಜನಸಂಖ್ಯೆ ಹೊಂದಿರುವ ಪಂಜಾಬ್ ಪ್ರಾಂತದಲ್ಲಿ 945 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ಹೇಳಿದ್ದಾರೆ.

ಪಂಜಾಬ್ ಪ್ರಾಂತದಾದ್ಯಂತ ಕಾನೂನು ಉಲ್ಲಂಘಿಸಿದ 945 ಕಿಡಿಗೇಡಿಗಳನ್ನು ಬಂಧಿಸಲಾಗಿದೆ. ಮಂಗಳವಾರ ಇಮ್ರಾನ್ ಬಂಧನದ ಬಳಿಕ ಭುಗಿಲೆದ್ದ ಘರ್ಷಣೆಯಲ್ಲಿ 130 ಅಧಿಕಾರಿಗಳು ಮತ್ತು ಭದ್ರತಾ ಸಿಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

Similar News