×
Ad

ಇಮ್ರಾನ್ ಖಾನ್ ಬಂಧನ ಕಾನೂನುಬಾಹಿರ, ತಕ್ಷಣವೇ ಬಿಡುಗಡೆ ಮಾಡಿ: ಪಾಕಿಸ್ತಾನ ಸುಪ್ರೀಂಕೋರ್ಟ್ ಆದೇಶ

Update: 2023-05-11 18:59 IST

ಇಸ್ಲಾಮಾಬಾದ್: ಪಾಕಿಸ್ತಾನ ಉನ್ನತ ಭ್ರಷ್ಟಾಚಾರ ನಿಗ್ರಹ ಘಟಕ ಇಮ್ರಾನ್ ಖಾನ್‌ರನ್ನು ಬಂಧಿಸಿರುವುದು ಕಾನೂನುಬಾಹಿರವಾಗಿದ್ದು, ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಪಾಕಿಸ್ತಾನದ ಸುಪ್ರೀಂಕೋರ್ಟ್ ಗುರುವಾರ ಆದೇಶಿಸಿದೆ.

ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಪಾಕ್‌ನ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಬೆಂಬಲಿಗರು ತನ್ನ ನಾಯಕನ ಬಂಧನವನ್ನು ಖಂಡಿಸಿ ಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿರುವಾಗಲೇ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ.

70ರ ವಯಸ್ಸಿನ ಖಾನ್ ಸದ್ಯ ನ್ಯಾಶನಲ್ ಅಕೌಂಟ್ಯಾಬಿಲಿಟಿ ಬ್ಯೂರೊ(ಎನ್‌ಎಬಿ)ಕಸ್ಟಡಿಯಲ್ಲಿದ್ದಾರೆ.

Similar News