×
Ad

ವಿದ್ಯಾಪೋಷಕ್‌ಗೆ ಅರ್ಜಿ ಆಹ್ವಾನ

Update: 2023-05-11 19:59 IST

ಉಡುಪಿ, ಮೇ 11: ಯಕ್ಷಗಾನ ಕಲಾರಂಗದ ಅಂಗ ಸಂಸ್ಥೆ ವಿದ್ಯಾ ಪೋಷಕ್, ಉಡುಪಿ ಜಿಲ್ಲೆಯ ಅನುದಾನಿತ ಅಥವಾ ಸರಕಾರಿ ಪ್ರೌಢ ಶಾಲೆಗಳಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.80ಕ್ಕೂ ಅಧಿಕ ಅಂಕ ಗಳಿಸಿದ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಂದ ವಿದ್ಯಾಪೋಷಕ್ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಆಹ್ವಾನಿಸಿದೆ. 

ಈಗಾಗಲೇ ಅರ್ಜಿಯನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ಕಳುಹಿಸಲಾಗಿದೆ. ಅರ್ಜಿಯನ್ನು ಶಾಲಾ ಮುಖ್ಯೋಪಾಧ್ಯಾಯರಿಂದ ಅಥವಾ ಸಂಸ್ಥೆಯ ಕಚೇರಿಯಿಂದ ಪಡೆದು ಕೊಂಡು ಭರ್ತಿ ಮಾಡಿ ಮೇ31ರೊಳಗೆ ಕಳುಹಿಸಿ ಕೊಡುವಂತೆ ಸಂಸ್ಥೆಯ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.

Similar News