ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಫಿನ್ಲ್ಯಾಂಡ್ ಪ್ರಧಾನಿ ಮರಿನ್
Update: 2023-05-11 23:35 IST
ಹೆಲ್ಸಿಂಕಿ, ಮೇ 11: ಫಿನ್ಲ್ಯಾಂಡ್ ಪ್ರಧಾನಿ ಸಾನಾ ಮರಿನ್ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
19 ವರ್ಷಗಳ ಸಹಬಾಳ್ವೆಯ ಬಳಿಕ ನಾವಿಬ್ಬರು ವಿವಾಹ ವಿಚ್ಛೇದನ ಪಡೆಯಲು ನಿರ್ಧರಿಸಿದ್ದೇವೆ. ವೈವಾಹಿಕ ಸಂಬಂಧ ಅಂತ್ಯಗೊಂಡರೂ ನಾವಿಬ್ಬರೂ ಉತ್ತಮ ಸ್ನೇಹಿತರಾಗಿ ಮುಂದುವರಿಯಲಿದ್ದೇವೆ ಎಂದವರು ಇನ್ಸ್ಟಾಗ್ರಾಮ್ನಲ್ಲಿ ಘೋಷಿಸಿದ್ದಾರೆ. ವಿವಾಹ ವಿಚ್ಛೇದನದ ನಿರ್ಧಾರವನ್ನು ಮರಿನಾ ಅವರ ಪತಿ ಮಾರ್ಕಸ್ ರೈಕೊನೆನ್ ದೃಢಪಡಿಸಿದ್ದಾರೆ. ಇವರಿಗೆ 5 ವರ್ಷದ ಮಗಳಿದ್ದಾಳೆ.