×
Ad

ಪುತ್ತೂರು: ಎಸ್‌ವೈಎಸ್ ಜಾಗೃತಿ ಯಾತ್ರೆಯ ಸಿದ್ಧತಾ ಸಭೆ

Update: 2023-05-12 19:55 IST

ಪುತ್ತೂರು : ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಪೋಷಕ ಸಂಘಟನೆ ಸುನ್ನಿ ಯುವ ಜನ ಸಂಘ (ಎಸ್‌ವೈಎಸ್)ಕ್ಕೆ 70 ವರ್ಷ ದಾಟಿದ ಹಿನ್ನೆಲೆಯಲ್ಲಿ 2024ರ ಮಹೋತ್ಸವದ ಪ್ರಯುಕ್ತ ಕೇಂದ್ರ ಸಮಿತಿಯ ನಾಯಕರು ಕೈಗೊಂಡಿರುವ ಜಾಗೃತಿ ಯಾತ್ರೆಯ ಸಿದ್ಧತಾ ಸಭೆಯು ಇತ್ತೀಚೆಗೆ ನಡೆಯಿತು.

ಮೇ 21ರಂದು ಕೊಡಗಿನಲ್ಲಿ ಆರಂಭಗೊಳ್ಳುವ ಯಾತ್ರೆಯು ಮೇ 28ರಂದು ತಿರುವನಂತಪುರಂನಲ್ಲಿ ಸಮಾಪನಗೊಳ್ಳಲಿದೆ.

ಆದರ್ಶ, ಸಾಂಘಿಕ, ಆಧ್ಯಾತ್ಮ ಮತ್ತು ಜಾತ್ಯತೀತ ಸಿದ್ದಾಂತ ಜಾಗೃತಿ ಮೂಡಿಸಲು ಕೈಗೊಳ್ಳಲಾದ ಯಾತ್ರಾ ಕಾರ್ಯಕ್ರಮದಲ್ಲಿ ಜಿಫ್ರಿ ಮುತ್ತುಕೋಯ ತಂಳ್, ಸಯ್ಯಿದ್ ಜುಮಲುಲ್ಲೈಲಿ ತಂಳ್, ಹಮೀದ್ ಫೈಝಿ ಅಂಬಲಕಡವು, ಸಲಾಹುದ್ದೀನ್ ಫೈಝಿ, ಅಬ್ದುಸ್ಸಮದ್ ಪೂಕೋಟೂರ್ ಮತ್ತಿತರ ಪ್ರಮುಖರು ಭಾಗವಹಿಸಲಿ ದ್ದಾರೆ. ಮೇ 21ರಂದು ಈ ಯಾತ್ರೆಯು ಪುತ್ತೂರಿಗೆ ತಲುಪಲಿದ್ದು, ಮಾಡನ್ನೂರು ನೂರುಲ್ ಹುದಾ ಕಾಲೇಜು ಕ್ಯಾಂಪಸ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ.

ಇದರ ಯಶಸ್ವಿಯ ನಿಟ್ಟಿನಲ್ಲಿ ಎಸ್‌ವೈಎಸ್ ದ.ಕ. ಜಿಲ್ಲಾ ಸಮಿತಿಯು ಪುತ್ತೂರಿನ ಬದ್ರಿಯಾ ಮದ್ರಸ ಹಾಲ್‌ನಲ್ಲಿ ಆಯೋಜಿಸಿದ್ದ ಸಿದ್ಧತಾ ಸಭೆಯಲ್ಲಿ ಎಸ್‌ವೈಎಸ್ ದ.ಕ.ಜಿಲ್ಲಾಧ್ಯಕ್ಷ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ, ಶರೀಫ್ ಫೈಝಿ ಕಡಬ, ಉಮರ್ ದಾರಿಮಿ ಸಾಲ್ಮರ, ಕೆಎಲ್ ಉಮರ್  ದಾರಿಮಿ ಪಟ್ಟೋರಿ, ನಝೀರ್ ಅರ್ಷದಿ, ಅಬೂಬಕರ್ ಹಾಜಿ ಮುಲಾರ್, ರಶೀದ್ ಹಾಜಿ ಪರ್ಲಡ್ಕ, ಸುಲೈಮಾನ್ ಮುಸ್ಲಿಯಾರ್ ಕಲ್ಲೆಗ, ಕತರ್ ಇಬ್ರಾಹಿಂ ಹಾಜಿ ಸುಳ್ಯ, ಬಾತಿಷ್ ಪಾತ್ರೋಡಿ, ಶರೀಫ್ ಮಿತ್ತಬೈಲು ಭಾಗವಹಿಸಿದ್ದರು. 

Similar News