×
Ad

ಮಂಗಳೂರು: ಸರಣಿ ಅಪಘಾತ; 10ಕ್ಕೂ ಅಧಿಕ ವಾಹನಗಳು ಜಖಂ

Update: 2023-05-12 21:03 IST

ಮಂಗಳೂರು, ಮೇ 12: ನಗರದ ಬಾವುಟಗುಡ್ಡೆ ಬಳಿ ಶುಕ್ರವಾರ ಸಂಜೆ ಸರಣಿ ಅಪಘಾತ ಸಂಭವಿಸಿದ್ದು, 10ಕ್ಕೂ ಅಧಿಕ ವಾಹನಗಳು ಜಖಂಗೊಂಡಿವೆ ಎಂದು ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.

ಬಾವುಟಗುಡ್ಡೆಯಿಂದ ಜ್ಯೋತಿ ವೃತ್ತದ ಕಡೆಗೆ ತೆರಳುತ್ತಿದ್ದ ಬಸ್ ಅಕ್ಕಪಕ್ಕದಲ್ಲಿದ್ದ ಕಾರು, ಬೈಕ್‌ಗಳಿಗೆ ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ಒಂದು ಬೈಕ್ ಬಸ್‌ನಡಿಗೆ ಬಿದ್ದಿದ್ದು ಸವಾರ ಅಪಾಯದಿಂದ ಪಾರಾಗಿದ್ದಾರೆ.

ಬಸ್ ಚಾಲಕನಿಗೆ ತಲೆ ಸುತ್ತು ಬಂದು ನಿಯಂತ್ರಣ ಕಳೆದುಕೊಂಡ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.

Similar News