12ನೇ ತರಗತಿ ಸಿಬಿಎಸ್‌ಸಿ ಪರೀಕ್ಷೆ: ಮಾಧವ ಕೃಪಾಗೆ ಶೇ.100 ಫಲಿತಾಂಶ
Update: 2023-05-12 21:16 IST
ಉಡುಪಿ, ಮೇ 12: ಮಣಿಪಾಲದ ಮಾಧವಕೃಪಾ ಸ್ಕೂಲ್ 12ನೇ ತರಗತಿಯ ಸಿಬಿಎಸ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. ಶಾಲೆಯಿಂದ ಪರೀಕ್ಷೆ ಬರೆದ ಎಲ್ಲಾ 83 ಮಂದಿ ತೇರ್ಗಡೆಗೊಂಡಿದ್ದಾರೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.
83 ಮಂದಿಯಲ್ಲಿ 27 ಮಂದಿ ಶೇ.90ಕ್ಕಿಂತ ಅಧಿಕ ಅಂಕಗಳೊಂದಿಗೆ ತೇರ್ಗಡೆಗೊಂಡಿದ್ದರೆ, 69 ಮಂದಿ ವಿಶಿಷ್ಟ ದರ್ಜೆಯಲ್ಲಿ ಉತ್ತೀರ್ಣ ರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಶಾಲೆಯ ಆದಿತ್ಯ ಕಿಣಿ ಕಲ್ಮಾಡಿ ಗರಿಷ್ಠ 500ರಲ್ಲಿ 491 (ಶೇ.98.2) ಅಂಕಗಳಿಸಿದ್ದು, ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ.