×
Ad

ಮಂಗಳೂರು ನಗರ ದಕ್ಷಿಣ: ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್‌ಗೆ ಗೆಲುವು

Update: 2023-05-13 16:43 IST

ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಸತತ ಎರಡನೇ ಬಾರಿಗೆ ಗೆಲುವಿನ ನಗೆ ಬೀರಿದ್ದಾರೆ.

ವೇದವ್ಯಾಸ ಕಾಮತ್ 91437 ಮತಗಳನ್ನು ಪಡೆದರೆ, ಅವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ನ ಜೆ.ಆರ್. ಲೋಬೊ ಸೋಲೊಪ್ಪಿಕೊಂಡಿದ್ದಾರೆ.

ಕೆಎಎಸ್ ಅಧಿಕಾರಿಯಾಗಿದ್ದ ಜೆ.ಆರ್.ಲೋಬೊ ಮಂಗಳೂರು ದಕ್ಷಿಣ ಕ್ಷೇತ್ರದಿಂದ 2013ರಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2018ರ ಚುನಾವಣೆಯಲ್ಲಿ ಬಿಜೆಪಿಯ ವೇದವ್ಯಾಸ ಕಾಮತ್ ಮುಂದೆ ಸೋಲು ಒಪ್ಪಿಕೊಂಡಿದ್ದರು. ಇದೀಗ ಈ ಬಾರಿಯ ಚುನಾವಣೆಯಲ್ಲೂ ಜೆ.ಆರ್.ಲೋಬೊ ಅವರು ವೇದವ್ಯಾಸ ಕಾಮತ್ ಮುಂದೆ ಸೋಲೊಪ್ಪಿಕೊಂಡಿದ್ದರು.‌

ಉದ್ಯಮಿಯಾಗಿರುವ ವೇದವ್ಯಾಸ ಕಾಮತ್ ಸಮಾಜ ಸೇವೆಯ ಮೂಲಕ ಗುರುತಿಸಲ್ಪಟ್ಟಿದ್ದರು. 2018ರಲ್ಲಿ ಮೊದಲ ಯತ್ನದಲ್ಲೇ ಶಾಸಕರಾಗಿದ್ದ ಜೆ.ಆರ್.ಲೋಬೊ ಅವರನ್ನು ಸೋಲಿಸುವ ಮೂಲಕ ಗಮನ ಸೆಳೆದಿದ್ದರು. ಇದೀಗ ಎರಡನೇ ಬಾರಿಗೆ ಗೆಲುವಿನ ನಗೆ ಬೀರಿದ್ದಾರೆ.

ಪ್ರತಿ ಸುತ್ತಿನ ಮತ ಎಣಿಕೆಯಲ್ಲಿ ಮುನ್ನಡೆ ಸಾಧಿಸುತ್ತಾ ಬಂದ ಕಾಮತ್, ಅಂತಿಮವಾಗಿ ಭಾರೀ ಮತಗಳ ಅಂತರದಿಂದ ಜಯಗಳಿಸಿದ್ದಾರೆ.

Similar News