×
Ad

ಮೂಡುಬಿದಿರೆ: ಬಿಜೆಪಿಯ ಉಮಾನಾಥ್ ಕೋಟ್ಯಾನ್‌ಗೆ ಗೆಲುವು

Update: 2023-05-13 17:04 IST

ಮಂಗಳೂರು: ಮೂಡುಬಿದಿರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ್ ಕೋಟ್ಯಾನ್ ಮತ್ತೆ ನಗುವಿನ ಗೆಲುವು ಬೀರಿದ್ದಾರೆ.‌

ಉಮನಾಥ್ ಕೋಟ್ಯಾನ್ 85858 ಮತಗಳನ್ನು ಪಡೆದರೆ ತನ್ನ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ 63575 ಮತ ಪಡೆದು ಮತದಾರರ ತೀರ್ಪಿಗೆ ತಲೆಬಾಗಿದ್ದಾರೆ.

2013ರಲ್ಲಿ ಮೊದಲ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಉಮಾನಾಥ್ ಕೋಟ್ಯಾನ್ ಅವರು ಕಾಂಗ್ರೆಸ್ ಅಭ್ಯರ್ಥಿ ಅಭಯಚಂದ್ರ ಜೈನ್ ವಿರುದ್ಧ ಸೋಲೊಪ್ಪಿಕೊಂಡಿದ್ದರು. 2018ರಲ್ಲಿ ಅಭಯಚಂದ್ರ ಜೈನ್ ವಿರುದ್ಧ ಮತ್ತೆ ಕಣಕ್ಕೆ ಇಳಿದಿದ್ದ ಉಮಾನಾಥ್ ಕೋಟ್ಯಾನ್ ಗೆಲುವಿನ ನಗೆ ಬೀರಿದ್ದರು. ಇದೀಗ ಈ ಬಾರಿಯ ಚುನಾವಣೆಯಲ್ಲೂ ಕೋಟ್ಯಾನ್ ಗೆಲುವು ಸಾಧಿಸಿದ್ದಾರೆ. ಒಟ್ಟಿನಲ್ಲಿ ಮೂರು ಬಾರಿ ಸ್ಪರ್ಧಿಸಿ ಎರಡು ಬಾರಿ ಗೆದ್ದಿದ್ದಾರೆ.

ಮಿಥುನ್ ರೈ ಕಾಂಗ್ರೆಸ್ನ ಯುವ ಪ್ರಭಾವಿ ನಾಯಕರಾಗಿದ್ದರು. ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯಿಂದ ಕಾಂಗ್ರೆಸ್ನ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

Similar News