×
Ad

ಯುವ ಜನತೆ ದೇಶದ ಸೊತ್ತು: ವಂ.ಗುರು ಅಶ್ವಿನ್ ಲೋಹಿತ್ ಕಾರ್ಡೋಜ

Update: 2023-05-16 21:45 IST

ಕಿನ್ನಿಗೋಳಿ, ಮೇ 16: ಬದುಕಿನಲ್ಲಿ ನಿಷ್ಠಾವಂತ ಗುಣ ಅಗತ್ಯ. ಜೀವನದಲ್ಲಿ ಸಕಾರಾತ್ಮಕ ಚಿಂತನೆ ಸದಾ ಉತ್ತಮವಾದದನ್ನು ‌ಸಾಧಿಸಲು ಸಹಕರಿಸುತ್ತದೆ‌‌ ಎಂದು ಮಂಗಳೂರಿನ ಭಾರತೀಯ ಕಥೊಲಿಕ್ ಯುವ ಸಂಚಲನದ ನಿರ್ದೇಶಕ ವಂದನೀಯ ಗುರು ಫಾದರ್ ಅಶ್ವಿನ್ ಲೋಹಿತ್ ಕಾರ್ಡೋಜ ಹೇಳಿದ್ದಾರೆ.

ಬಳ್ಕುಂಜೆಯಲ್ಲಿ  ರವಿವಾರ ನಡೆದ ಭಾರತೀಯ ಕಥೊಲಿಕ್ ಯುವ ಸಂಚಲನದ ಸುವರ್ಣ ಮಹೋತ್ಸವ ಸಂದರ್ಭ ಮಾತನಾಡಿದ ಅವರು‌, ಪ್ರತಿಯೊಬ್ಬರು ಪ್ರಾಮಾಣಿಕತೆ ಹಾಗೂ ನಂಬಿಕೆಯನ್ನು ಬದುಕಿನಲ್ಲಿ ‌ರೂಢಿಸಿ ಕೊಳ್ಳಬೇಕು. ಯುವಜನತೆ ಈ ದೇಶದ ಅಮೂಲ್ಯ ಸಂಪತ್ತು. ಹಾಗಾಗಿ ಅವರ ಮೇಲೆ‌ ಸಾಕಷ್ಟು ಜವಾಬ್ದಾರಿ ಗಳಿವೆ. ಇದನ್ನು ಅರಿತು ಅವರು ಕಾರ್ಯಪ್ರವೃತ್ತರಾದರೆ ಒಳಿತು‌ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತೀಯ ಕಥೊಲಿಕ್ ಯುವ ಸಂಚಲನ ಬಳಕುಂಜೆ ಘಟಕದ ನಿರ್ದೇಶಕ ವಂದನೀಯ ಗುರು ಗಿಲ್ಬರ್ಟ್ ಡಿಸೋಜ, ಪ್ರತಿಭೆ ಸ್ವಯಂ ಅಭಿವೃದ್ಧಿಗೆ ದಾರಿ. ಜಗತ್ತಿನಲ್ಲಿ ಯುವ ಜನತೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಯುವಜನರು ತಮ್ಮ ಪ್ರತಿಭೆಯ ಮೂಲಕ ದೇಶಕ್ಕೆ ಮಾದರಿ ಯಾಗಬೇಕಾಗಿದೆ‌. ಉತ್ತಮ ಚಿಂತನೆ ಉತ್ತಮ ಭವಿಷ್ಯ ರೂಪಿಸುತ್ತದೆ ಎಂದರು.

ದಿವ್ಯ ಬಲಿಪೂಜೆಯೊಂದಿಗೆ ಕಾರ್ಯಕ್ರಮವು ಆರಂಭಗೊಂಡು,‌ ಬಳಿಕ ಬಳಕುಂಜೆ ಪೇಟೆಯಿಂದ ಚರ್ಚ್ ಮೈದಾನ ದವರೆಗೆ ನಡೆದ ಮೆರವಣಿಗೆಗೆ ಬಳಕುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮತಾ ಡಿ. ಪೂಂಜಾ ಅವರು ಪಿಂಗಾರ ಅರಳಿಸುವ ಮೂಲಕ ಚಾಲನೆ ನೀಡಿದರು.

ಸುವರ್ಣ ಮಹೋತ್ಸವದ ಸವಿನೆನಪಿಗಾಗಿ "ಬಳ್ಕುಂಜೆಚೆಂ ಬಳ್" ಎಂಬ ಸ್ಮರಣಿಕೆಯನ್ನು ಬಿಡುಗಡೆಗೊಳಿಸ ಲಾಯಿತು. ಇದು ಬಳ್ಕುಂಜೆಯ ಐವತ್ತು ವರ್ಷಗಳ ಇತಿಹಾಸ, ಧರ್ಮಗುರುಗಳ ಲೇಖನ, ಅನುಭವ ಕಥನ ಹತ್ತು ಹಲವು ವಿಷಯಗಳನ್ನುಹೊಳಗೊಂಡಿದೆ. ಕಾರ್ಯಕ್ರಮದಲ್ಲಿ ಐವತ್ತು ವರ್ಷದಲ್ಲಿ ಸೇವೆಸಲ್ಲಿಸಿದ ಎಲ್ಲಾ ಅಧ್ಯಕ್ಷರು ಹಾಗೂ ನಿರ್ದೇಶಕರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಐಸಿವೈಎಂ ಧರ್ಮಪ್ರಾಂತ್ಯದ ಮಾಜಿ ‌ನಿರ್ದೇಶಕರಾದ ವಂದನೀಯ ಗುರು ರೊನಾಲ್ಡ್ ಪ್ರಕಾಶ್ ಡಿಸೋಜ, ಅಮ್ಮೆಂಬಳ ಚರ್ಚ್ ನ ಧರ್ಮಗುರುಗಳಾದ ವಂದನೀಯ ಫಾದರ್ ಮೈಕಲ್ ಡಿಸಿಲ್ವಾ, ವಂದನೀಯ ಗುರು ಪ್ರವೀಣ್ ಅರಾನ್ಹ ಎಸ್ .ವಿ.ಡಿ., ವಂದನೀಯ ಗುರು ಅನಿಲ್ ವಿನ್ಸೆಂಟ್ ಮಿನೇಜಸ್, ವಂದನೀಯ ಗುರು ಡೆನಿಸ್ ಮಿನೇಜಸ್, ಎಮ್ ಸಿಸಿ ಬ್ಯಾಂಕ್ ಅಧ್ಯಕ್ಷ  ಅನಿಲ್‌ ಲೋಬೊ, ಲೆಕ್ಸಾ ಲೈಟಿಂಗ್ನ ಸಿ.ಇ‌.ಒ ರೊನಾಲ್ಡ್ ಪ್ರಕಾಶ್ ಡಿಸೋಜಾ, ‌ಐಸಿವೈಎಂ ಕರ್ನಾಟಕ ಪ್ರಾಂತೀಯ ಅಧ್ಯಕ್ಷ ನೇವಿನ್ ಆಂಟನಿ, ಐಸಿವೈಎಂ ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷ ಅನಿಲ್ ಜೋನ್ ಸಿಕ್ವೇರಾ, ಐಸಿವೈಎಂ ಮಂಗಳೂರು ಉತ್ತರವಲಯದ ಅಧ್ಯಕ್ಷೆ  ಕುಮಾರಿ ಮಾರ್ವೆಲ್ ಮಥಾಯಸ್, ಬಳಕುಂಜೆ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷೆ ಡಾ. ಫ್ರೀಡ ರೊಡ್ರಿಗಸ್, ಚರ್ಚ್ ಆಯೋಗಗಳ ಸಂಯೋಜಕರಾದ ಲವಿನಾ ಸೆರಾವೊ, ಬಳ್ಕುಂಜೆ ಭಾರತೀಯ ಕಥೊಲಿಕ್‌ ಯುವ ಸಂಚಲನದ ಸಚೇತಕಿ ಕುಮಾರಿ ಮೆಲ್ರೀಡ ಜೇನ್ ರೊಡ್ರಿಗಸ್, ಐಸಿವೈಎಂ ಅಧ್ಯಕ್ಷೆ ಕುಮಾರಿ ಕ್ಯಾರೊಲಿನ್ ಕ್ರಿಸ್ ಡಿಸೋಜ, ಕಾರ್ಯದರ್ಶಿ ಕುಮಾರಿ ಕ್ಲೆರಿಸ್ಸಾ ಕಾರ್ಡೋಜ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Similar News