×
Ad

ಚೀನಾ: ಸೇನೆಯ ಬಗ್ಗೆ ತಮಾಷೆ ಮಾಡಿದ ಕಾಮೆಡಿ ತಂಡಕ್ಕೆ 2 ದಶಲಕ್ಷ ಡಾಲರ್ ದಂಡ

Update: 2023-05-17 21:56 IST

ಬೀಜಿಂಗ್, ಮೇ 17: ಕಾರ್ಯಕ್ರಮದ ಸಂದರ್ಭ ಸೇನೆಯ ಬಗ್ಗೆ ತಮಾಷೆ ಮಾಡಿದ ಕಾಮೆಡಿ ತಂಡಕ್ಕೆ ಚೀನಾದ ಅಧಿಕಾರಿಗಳು 2 ದಶಲಕ್ಷ ಡಾಲರ್ ದಂಡ ವಿಧಿಸಿದ ಜೊತೆಗೆ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಿರುವುದಾಗಿ ವರದಿಯಾಗಿದೆ.

ಬೀಜಿಂಗ್‍ನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕಾಮಿಡಿಯನ್ ಲಿ ಹವೋಷಿ, ಚೀನಾದ ಸೇನೆಯ ಘೋಷವಾಕ್ಯವನ್ನು ತಮಾಷೆಯಾಗಿ ಉಲ್ಲೇಖಿಸಿದ್ದಾರೆ ಎಂದು ದೂರು ಕೇಳಿಬಂದಿದೆ. ತನ್ನ ಸಾಕು ನಾಯಿಗಳು ಅಳಿಲೊಂದನ್ನು ಅಟ್ಟಿಸಿಕೊಂಡು ಹೋದ ಸಂದರ್ಭವನ್ನು ತಮಾಷೆಯಾಗಿ ವಿವರಿಸುತ್ತಿದ್ದ ಹವೋಷಿ `ಉತ್ತಮ ಕೆಲಸದ ಶೈಲಿ, ಯುದ್ಧವನ್ನು ಗೆಲ್ಲುವ ಸಾಮಥ್ರ್ಯ' ಎಂಬ ಘೋಷವಾಕ್ಯವನ್ನು ಉಲ್ಲೇಖಿಸಿದ್ದರು. ಇದು ಕಾನೂನಿನ ಉಲ್ಲಂಘನೆಯಾಗಿದ್ದು ಕೆಟ್ಟ ಸಾಮಾಜಿಕ ಪರಿಣಾಮಕ್ಕೆ ಕಾರಣವಾಗಲಿದೆ ಎಂದು ಬೀಜಿಂಗ್ ನಗರಪಾಲಿಕೆಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ವಿಭಾಗ ಹೇಳಿದೆ.

ಈ ಅಪರಾಧಕ್ಕಾಗಿ ಕಾಮೆಡಿ ತಂಡಕ್ಕೆ 2.13 ದಶಲಕ್ಷ ಡಾಲರ್ ದಂಡ ವಿಧಿಸಲಾಗಿದ್ದು ಕಾಮೆಡಿಯನ್ ಹವೋಷಿಯ  ಕಾರ್ಯಕ್ರಮಗಳನ್ನು ಅನಿರ್ಧಿಷ್ಟಾವಧಿಗೆ ತಡೆಹಿಡಿಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಾರ್ಯಕ್ರಮದ ಸಂದರ್ಭ ಹವೋಷಿ ಮಾಡಿದ ತಮಾಷೆ ಸೂಕ್ತವಲ್ಲದ ರೂಪಕವಾಗಿತ್ತು. ಇದಕ್ಕಾಗಿ ಕ್ಷಮೆ ಯಾಚಿಸುವುದಾಗಿ ಸಂಸ್ಥೆ ಹೇಳಿದೆ.

Similar News