ಪಾಕ್ ಮಾಜಿ ಪ್ರಧಾನಿ ಇಮ್ರಾನ್‍ಗೆ ಬಂಧನದಿಂದ ತಡೆ: ಮೇ ಅಂತ್ಯದವರೆಗೆ ವಿಸ್ತರಣೆ
Update: 2023-05-17 22:58 IST
ಇಸ್ಲಮಾಬಾದ್, ಮೇ 17: ಮಾಜಿ ಪ್ರಧಾನಿ, ಪಿಟಿಐ ಪಕ್ಷದ ಅಧ್ಯಕ್ಷ ಇಮ್ರಾನ್‍ಖಾನ್‍ರಿಗೆ ಬಂಧನದಿಂದ ತಡೆಯನ್ನು ಮೇ 31ರವರೆಗೆ ವಿಸ್ತರಿಸಿ ಇಸ್ಲಮಾಬಾದ್‍ನ ಹೈಕೋರ್ಟ್ ಬುಧವಾರ ಆದೇಶ ಹೊರಡಿಸಿದೆ.
ಇಮ್ರಾನ್ ವಿರುದ್ಧ ದಾಖಲಿಸಿರುವ ಪ್ರಕರಣಗಳ ಬಗ್ಗೆ ಮಾಹಿತಿ ಒದಗಿಸುವಂತೆ ಸರಕಾರದ ವಕೀಲರಿಗೆ ಹೈಕೋರ್ಟ್ ಸೂಚಿಸಿತು. ಆದರೆ ಇದಕ್ಕೆ ಕಾಲಾವಕಾಶದ ಅಗತ್ಯವಿದೆ ಎಂದು ವಕೀಲರು ಹೇಳಿದಾಗ, ಮೇ 31ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿದ ಹೈಕೋರ್ಟ್, ಅದುವರೆಗೆ ಯಾವುದೇ ಪ್ರಕರಣದಲ್ಲಿ ಇಮ್ರಾನ್‍ಖಾನ್‍ರನ್ನು ಬಂಧಿಸಬಾರದು ಎಂದು ಆದೇಶಿಸಿತು.