ಮಂಗಳೂರು: ಚೂರಿಯಿಂದ ಇರಿದು ಯುವಕನ ಕೊಲೆಗೆ ಯತ್ನ; ಆರೋಪಿ ಪರಾರಿ
ಆನ್‌ಲೈನ್ ಗೇಮ್‌ನಲ್ಲಿ ಸೋಲಿನ ದ್ವೇಷ
Update: 2023-05-18 20:41 IST
ಮಂಗಳೂರು, ಮೇ 18: ಆನ್‌ಲೈನ್ ಗೇಮ್‌ನಲ್ಲಿ ಸೋಲಿಸಿದ ದ್ವೇಷದಿಂದ ಪ್ರತ್ಯುಶ್ ಸಾಲಿಯಾನ್ ಎಂಬವರನ್ನು ಸಂಜಯ್ ಪೂಜಾರಿ ಎಂಬಾತ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿ ಪರಾರಿಯಾಗಿರುವುದಾಗಿ ಪಾಂಡೇಶ್ವರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ನಗರದ ಜಪ್ಪು ಬಪ್ಪಾಲ್‌ನ ಪ್ರತ್ಯುಶ್ ಸಾಲಿಯಾನ್ ಆರೋಪಿ ಸಂಜಯ್ ಪೂಜಾರಿಯನ್ನು ‘ಫ್ರೀಫೈರ್’ ಎಂಬ ಮೊಬೈಲ್ ಆನ್‌ಲೈನ್ ಗೇಮ್‌ನಲ್ಲಿ ಸೋಲಿಸಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಪ್ರತ್ಯುಶ್‌ನ ಮೇಲೆ ಆರೋಪಿ ಸಂಜಯ್ ದ್ವೇಷ ಸಾಧಿಸಿದ್ದ ಎಂದು ಹೇಳಲಾಗಿದೆ.
ಮೇ 17ರಂದು ಸಂಜೆ 3:40ಕ್ಕೆ ಪ್ರತ್ಯುಶ್ ನಂದಿಗುಡ್ಡೆ ಕಡೆಗೆ ಹೋಗುತ್ತಿದ್ದಾಗ, ಜೆಪ್ಪು ಬಪ್ಪಾಲ್ ರಸ್ತೆ ಸಮೀಪ ಸ್ಕೂಟರ್‌ನಲ್ಲಿ ಕುಳಿತಿದ್ದ ಆರೋಪಿ ಸಂಜಯ್ ಅವಾಚ್ಯ ಶಬ್ಧದಿಂದ ತನಗೆ ಬೈದು ಚೂರಿಯಿಂದ ಎದೆಗೆ ಇರಿಯಲು ಯತ್ನಿಸಿದ ಎಂದು ದೂರಿನಲ್ಲಿ ತಿಳಿಲಾಗಿದೆ.
ಪ್ರತ್ಯುಶ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.