×
Ad

ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದ ಸಮೀಪದಲ್ಲೇ ಕಸದ ರಾಶಿ!

Update: 2023-05-18 20:54 IST

ಉಡುಪಿ: ಶ್ರೀಕೃಷ್ಣ ಮಠದ ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ರಾಜಾಂಗಣ ಸಭಾಭವನದ ಸಮೀಪದಲ್ಲೇ ಕಸದ ರಾಶಿಗಳು ಕಂಡು ಬರುತ್ತಿದ್ದು, ಇವುಗಳ ವಿಲೇವಾರಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ರಾಜಾಂಗಣದ ಪ್ರವೇಶ ದ್ವಾರದ ಸನಿಹ ಬಿದ್ದಿರುವ ಕಸ, ತ್ಯಾಜ್ಯಗಳ ರಾಶಿಗಳು  ಪವಿತ್ರ ತೀರ್ಥ ಕ್ಷೇತ್ರದ ಅಂದಗೆಡಿಸಿದೆ. ಅಲ್ಲದೆ ಇಲ್ಲಿ ರೋಗ ವಾಹಕ ಸೊಳ್ಳೆಗಳ ಉತ್ಪತ್ತಿಯಾಗುವ ಲಕ್ಷಣಗಳು ಕಂಡುಬಂದಿವೆ. ಸುಂದರ ಉಡುಪಿ- ಶ್ರೀಕೃಷ್ಣನ ಉಡುಪಿ ಎಂದು ಬಣ್ಣನೆಗೆ ಪಾತ್ರವಾಗಿರುವ ಉಡುಪಿಗೆ ಇದೊಂದು ಕಪ್ಪುಚುಕ್ಕೆಯಂತಾಗಿದೆ ಎಂದು ದೂರಲಾಗಿದೆ.

ಆದುದರಿಂದ ಸಂಬಂಧಪಟ್ಟವರು ತಕ್ಷಣ ಕಸ ತ್ಯಾಜ್ಯಗಳನ್ನು ವಿಲೇವಾರಿ ಮಾಡಬೇಕು ಎಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಶಿರೂರು ಒತ್ತಾಯಿಸಿದ್ದಾರೆ.

Similar News