ಉಡುಪಿ: ಆಸ್ಪತ್ರೆಗೆ ಆನ್‌ಲೈನ್ ದಾಖಲಾತಿಯ ಹೆಸರಿನಲ್ಲಿ ವಂಚನೆ
Update: 2023-05-18 21:04 IST
ಉಡುಪಿ: ಆಸ್ಪತ್ರೆಗೆ ಆನ್‌ಲೈನ್ ದಾಖಲಾತಿಯ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಸಾವಿರಾರು ರೂ. ವಂಚಿಸಿರುವ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು ಶಿರೂರು ನೀರಗದ್ದೆಯ ಮಹಾದೇವ (33) ಎಂಬವರು ಮೇ 17ರಂದು ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾತಿಗಾಗಿ ಗೂಗಲ್‌ನ ಸಹಾಯ ದಿಂದ ಸಂಪರ್ಕ ಸಂಖ್ಯೆಯನ್ನು ಹುಡುಕಿದ್ದು, ಅಲ್ಲಿ ದೊರೆತ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದ್ದರು. ಅಲ್ಲಿ ಇನ್ನೊಂದು ದೂರವಾಣಿ ಸಂಖ್ಯೆ ಮೂಲಕ ಕಸ್ಟಮರ್ ಸಪೋರ್ಟ್ ಆ್ಯಪ್‌ನ್ನು ಇವರ ಮೊಬೈಲ್‌ನ ವಾಟ್ಸ್‌ಅಪ್‌ಗೆ ಕಳುಹಿಸಿದ್ದರು.
ಅದರಲ್ಲಿ ವಿವರಗಳನ್ನು ಪೂರ್ಣಗೊಳಿಸಲು ಸೂಚಿಸಿ, ಹಣ ಪಾವತಿಸುವಂತೆ ತಿಳಿಸಿದ ಮೇರೆಗೆ ಇವರು ಫೋನ್ ಪೇ ಮೂಲಕ ಪಾರ್ಸ್‌ವರ್ಡ್ ಮತ್ತು ಓಟಿಪಿ ಸಂಖ್ಯೆಯನ್ನು ನಮೂದಿಸಿದರು. ಮೇ 18ರಂದು ಇವರ ಖಾತೆಯಿಂದ ಒಟ್ಟು 99,992 ಹಣವನ್ನು ಮೋಸದಿಂದ ವರ್ಗಾಯಿಸಿಕೊಂಡು ವಂಚಿಸಿ ರುವುದಾಗಿ ದೂರಲಾಗಿದೆ.