ಉಡುಪಿ: ಆನ್‌ಲೈನ್ ಟಾಸ್ಕ್ ಉದ್ಯೋಗದ ಹೆಸರಿನಲ್ಲಿ ವಂಚನೆ
Update: 2023-05-18 21:14 IST
ಉಡುಪಿ, ಮೇ 18: ಟಾಸ್ಕ್ ಉದ್ಯೋಗಕ್ಕೆ ಹೆಚ್ಚುವರಿ ಹಣವನ್ನು ನೀಡುವು ದಾಗಿ ಮಹಿಳೆಯೊಬ್ಬರನ್ನು ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ ದಶರಥ ನಗರದ ರಕ್ಷಾ (30) ಎಂಬವರು ವಾಟ್ಸ್‌ಅಪ್‌ಗೆ ಬಂದ ಟಾಸ್ಕ್ ಉದ್ಯೋಗ ನಡೆಸಿ, ಕಮಿಷನ್ ಮತ್ತು ಹೆಚ್ಚಿನ ಹಣ ಪಡೆಯುವ ಬಗ್ಗೆ ಸಂದೇಶವನ್ನು ನಂಬಿದ್ದು, ಟೆಲಿಗ್ರಾಮ್ ಆ್ಯಪ್ ಮೂಲಕ ಆರೋಪಿಗಳನ್ನು ಸಂಪರ್ಕಿಸಿದಾಗ ಟಾಸ್ಕ್ ಬಗ್ಗೆ ಹಣ ಪಾವತಿಸುವಂತೆ ಬ್ಯಾಂಕ್ ಖಾತೆಗಳನ್ನು ಹಾಗೂ ಯುಪಿಐ ಐ.ಡಿ.ಗಳನ್ನು ನೀಡಿದ್ದರು.
ಅದರಂತೆ ರಕ್ಷಾ ಮೇ 17ರಂದು 2,95,500ರೂ. ಹಣವನ್ನು ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು. ಆದರೆ ಆರೋಪಿಗಳು ಉದ್ಯೋಗವನ್ನು ನೀಡದೇ, ಪಡೆದ ಹಣವನ್ನು ವಾಪಾಸು ನೀಡದೇ ಮೋಸ ಮಾಡಿರುವುದಾಗಿ ದೂರಲಾಗಿದೆ.