ಕೊಂಕಣಿ -ಕನ್ನಡ ಗವಳ್ಕರ್ ಕೊಂಕಣಿ ಶಬ್ದಕೋಶ ಬಿಡುಗಡೆ
ಉಡುಪಿ: ಆರ್ಎಸ್ಬಿ ಸಮಾಜದ ಹಿರಿಯ ಸಾಹಿತಿ, ಕವಿ, ಲೇಖಕ ಎರ್ಲಪಾಡಿ ನಾರಾಯಣ ಗವಳ್ಕರ್ ಸುಮಾರು 10,600 ಶಬ್ದಗಳಿಗೂ ಅಧಿಕ ಆರ್ಎಸ್ಬಿ ಕೊಂಕಣಿ ಭಾಷೆಯಲ್ಲಿ ರಚಿಸಿದ ಕೊಂಕಣಿ -ಕನ್ನಡ ಗವಳ್ಕರ್ ಕೊಂಕಣಿ ಶಬ್ದಕೋಶವನ್ನು ಶ್ರೀಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾಧೀಶ ಶ್ರೀಶಿವಾನಂದ ಸರಸ್ವತೀ ಸ್ವಾಮೀ ಮಹಾರಾಜ್ ಇತ್ತೀಚೆಗೆ ಆತ್ರಾಡಿಯಲ್ಲಿರುವ ಶಾಖಾ ಮಠದಲ್ಲಿ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಲೇಖಕ ಎರ್ಲಪಾಡಿ ನಾರಾಯಣ ಗವಳ್ಕರ್, ಮಂಗಳೂರು ಕೈಗಾರಿಕೆ ಮತ್ತು ವಾಣಿಜ್ಯ ವಿಭಾಗದ ಜಂಟಿ ಆಯುಕ್ತ ಎಂ. ಗೋಕುಲ್ದಾಸ್ ನಾಯಕ್, ಉಡುಪಿ ಗೀತಾಂಜಲಿ ಸಿಲ್ಕ್ಸ್ನ ಸಂತೋಷ್ ವಾಗ್ಲೆ, ಕಛೇರಿ ಸದಾನಂದ ನಾಯಕ್, ಶ್ರೀದುರ್ಗಾ ಪರಮೇಶ್ವರೀ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಎಳ್ಳಾರೆ ಪಾಂಡುರಂಗ ಕಾಮತ್, ಕಾರ್ಕಳ ರಾಜಾಪುರ ಸಾರಸ್ವತ ಸೊಸೈಟಿ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು, ಹಂಸ ಚೈತನ್ಯ ಸೌಹಾರ್ದ ಸಹಕಾರಿಯ ಅಧ್ಯಕ್ಷ ಸುಧೀರ್ ನಾಯಕ್, ಸುರೇಶ್ ಬೋಕಡೆ ಕಾರ್ಕಳ, ಮಠದ ವೈದಿಕರಾದ ಮಹೇಶ್ ಭಟ್ ಮೊದಲಾದವರು ಉಪಸ್ಥಿತರಿದ್ದರು.