×
Ad

ಹಿರಿಯ ನಾಗರಿಕರಿಗೆ ತೀರ್ಥಯಾತ್ರೆಗಾಗಿ ವಿಮಾನ ಪ್ರಯಾಣ ಸೌಲಭ್ಯ ಒದಗಿಸಿದ ಮಧ್ಯಪ್ರದೇಶ ಸರಕಾರ

Update: 2023-05-21 14:53 IST

ಭೋಪಾಲ್: ಹಿರಿಯ ನಾಗರಿಕರಿಗೆ ತೀರ್ಥಯಾತ್ರೆಗಾಗಿ ವಿಮಾನ ಪ್ರಯಾಣ ಸೌಲಭ್ಯವನ್ನು ಒದಗಿಸಿದ ಮೊದಲ ರಾಜ್ಯವಾಗಿ  ಮಧ್ಯಪ್ರದೇಶ ಹೊರಹೊಮ್ಮಿದೆ.  ರವಿವಾರ  32 ಜನರು ಭೋಪಾಲ್‌ನಿಂದ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ  ವಿಮಾನದಲ್ಲಿ ತೆರಳಿದ್ದಾರೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್(Shivraj Singh Chouhan) ಅವರು ರವಿವಾರ  ಬೆಳಗ್ಗೆ ಈ ಯೋಜನೆಗೆ ಚಾಲನೆ ನೀಡಿದ್ದು, ಭೋಪಾಲ್‌ನ ರಾಜಾ ಭೋಜ್ ವಿಮಾನ ನಿಲ್ದಾಣದಲ್ಲಿ ರಾಜ್ಯದ ಮುಖ್ಯಮಂತ್ರಿ ತೀರ್ಥ-ದರ್ಶನ್ ಯೋಜನೆಯಡಿಯಲ್ಲಿ 32 ಹಿರಿಯ ನಾಗರಿಕರು ಪ್ರಯಾಣಿಸಿದರು.

ಗುಂಪು 24 ಪುರುಷರು ಹಾಗೂ  ಎಂಟು ಮಹಿಳೆಯರನ್ನು ಒಳಗೊಂಡಿದೆ.

ಮೊದಲ ಹಂತದ ವಿಮಾನ ಪ್ರಯಾಣ ಸೌಲಭ್ಯದ ಅಡಿಯಲ್ಲಿ, ಮಧ್ಯಪ್ರದೇಶದ  ಹಿರಿಯ ನಾಗರಿಕರು ರಾಜ್ಯದ ವಿವಿಧ ವಿಮಾನ ನಿಲ್ದಾಣಗಳಿಂದ ಈ ವರ್ಷದ ಜುಲೈವರೆಗೆ ವಿವಿಧ ಬ್ಯಾಚ್‌ಗಳಲ್ಲಿ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ.

"ಪ್ರತಿಯೊಬ್ಬ ವ್ಯಕ್ತಿಯೂ ವಿಮಾನದಲ್ಲಿ ಪ್ರಯಾಣಿಸುವ ಕನಸು ಕಾಣುತ್ತಾನೆ. ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ವಿಮಾನದಲ್ಲಿ ಪ್ರಯಾಣಿಸಲು ಬಯಸುತ್ತಾರೆ. ನಮ್ಮ ಕನಸು ಈಡೇರುತ್ತಿದೆ" ಎಂದು 72 ವರ್ಷದ ರಾಮ್ ಸಿಂಗ್ ಕುಶ್ವಾಹಾ NDTV ಗೆ ಹೇಳಿದ್ದಾರೆ.

Similar News