‘ದಂಪತಿ ವಿನಿಮಯ’ ಜಾಲ ಪ್ರಕರಣ: ದೂರದಾರ ಪತ್ನಿಯನ್ನು ಕೊಂದು ವಿಷ ಸೇವಿಸಿದ ಪತಿ

Update: 2023-05-21 09:35 GMT

ಕೊಟ್ಡಾಯಂ: ದಂಪತಿಗಳ ವಿನಿಮಯ ಜಾಲ ಪ್ರಕರಣದಲ್ಲಿ ದೂರುದಾರಳಾಗಿದ್ದ ಮಹಿಳೆಯೊಬ್ಬಳನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಶುಕ್ರವಾರ ಕೊಟ್ಟಾಯಂ ಜಿಲ್ಲೆಯಲ್ಲಿ ನಡೆದಿದೆ. ಶುಕ್ರವಾರ ಬೆಳಗ್ಗೆ 10.30ರ ವೇಳೆ ಆಕೆ ಹತ್ಯೆಗೀಡಾದ ಸ್ಥಿತಿಯಲ್ಲಿ ಮನಾರ್‌ ಕಾಡ್‌ನ ತನ್ನ ನಿವಾಸದಲ್ಲಿ ಪತ್ತೆಯಾಗಿದ್ದಾಳೆ ಎಂದು thenewsminute.com ವರದಿ ಮಾಡಿದೆ.

ಆಕೆಯನ್ನು ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿರುವ ಆಕೆಯ ಪತಿಯು ವಿಷ ಸೇವಿಸಿದ್ದು, ಆತನನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಮನಾರ್‌ಕಾಡ್ ಠಾಣೆ ಪೊಲೀಸರು ತಿಳಿಸಿದ್ದಾರೆ. ಆತ ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದರಿಂದ ಹತ್ಯೆಯ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವರದಿಗಳ ಪ್ರಕಾರ, ಮೃತ ಮಹಿಳೆಯು ತನ್ನ ಪತಿಯಿಂದ ಬೇರ್ಪಟ್ಟು ತನ್ನ ಪೋಷಕರೊಂದಿಗೆ ವಾಸಿಸುತ್ತಿದ್ದಳು.

ಮೃತ ಮಹಿಳೆಯು ತನ್ನ ಪತಿಯು ಹಲವಾರು ಪುರುಷರೊಂದಿಗೆ ದಂಪತಿ ವಿನಿಮಯ ಜಾಲದಲ್ಲಿ ಲೈಂಗಿಕ ಸಂಪರ್ಕ ಹೊಂದುವಂತೆ ಒತ್ತಡ ಹೇರುತ್ತಿದ್ದಾನೆ ಎಂದು ಕೊಟ್ಟಾಯಂ ಜಿಲ್ಲಾ ಪೊಲೀಸರಿಗೆ ದೂರು ನೀಡುವ ಮೂಲಕ ರಾಜ್ಯದಲ್ಲಿ ಕಾರ್ಯಪ್ರವೃತ್ತವಾಗಿರುವ ದಂಪತಿ ವಿನಿಮಯ ಜಾಲವು ಕಳೆದ ಜನವರಿ ತಿಂಗಳಲ್ಲಿ ಬೆಳಕಿಗೆ ಬಂದಿತ್ತು. ಆಕೆಯ ಪತಿಯು ಎರಡು ವರ್ಷಗಳ ಕಾಲ ದಂಪತಿ ವಿನಿಮಯ ಜಾಲದಲ್ಲಿ ವಿವಿಧ ಪುರುಷರೊಂದಿಗೆ ಆಕೆಯನ್ನು ಬಲವಂತವಾಗಿ ಲೈಂಗಿಕ ಸಂಪರ್ಕದಲ್ಲಿ ತೊಡಗಿಸಿದ್ದ ಎಂದು ಹೇಳಲಾಗಿದೆ.

Similar News