×
Ad

ಸಿಇಟಿ ಪರೀಕ್ಷೆ : ದ.ಕ. ಜಿಲ್ಲೆಯಲ್ಲಿ ರಸಾಯನಶಾಸ್ತ್ರಕ್ಕೆ 1892, ಭೌತ ಶಾಸ್ತ್ರಕ್ಕೆ 1887 ಮಂದಿ ಗೈರು

Update: 2023-05-21 21:17 IST

ಮಂಗಳೂರು, ಮೇ 21: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವೃತ್ತಿಪರ ಕೋರ್ಸ್‌ಗಳಿಗೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯ  ಎರಡನೇ ದಿನ  ರವಿವಾರ ಭೌತ ಶಾಸ್ತ್ರ ವಿಷಯ ಪರೀಕ್ಷೆಗೆ 1,887 ಮಂದಿ ಗೈರು ಹಾಜರಾಗಿದ್ದಾರೆ.

ರಸಾಯನಶಾಸ್ತ್ರ ಪರೀಕ್ಷೆಗೆ 1,892 ಮಂದಿ ಹಾಜರಾಗಲಿಲ್ಲ. ಜಿಲ್ಲೆ ಒಟ್ಟು 28 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ನಡೆಸಲಾಗಿತ್ತು. ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರ  ಪರೀಕ್ಷೆಗೆ 16,206 ಮಂದಿ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು.

ರಸಾಯನಶಾಸ್ತ್ರ ಪರೀಕ್ಷೆಗೆ 14,314 ಮತ್ತು ಭೌತಶಾಸ್ತ್ರ ಪರೀಕ್ಷೆಗೆ 14,319 ಮಂದಿ ಹಾಜರಾಗಿದ್ದಾರೆ  ಎಂದು ದ.ಕ.ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಮೂಲಗಳು ತಿಳಿಸಿವೆ.

Similar News