ಕೆಟ್ಟು ನಿಂತ ಗೂಡ್ಸ್ ರೈಲು: ಬೆಂಗಳೂರು- ಮುರ್ಡೇಶ್ವರ ರೈಲು ಸಂಚಾರಕ್ಕೆ ತೊಂದರೆ
Update: 2023-05-22 21:22 IST
ಮಂಗಳೂರು: ನಗರದ ಹೊರವಲಯದ ಜೋಕಟ್ಟೆ ಎಂಬಲ್ಲಿ ಸೋಮವಾರ ಸಂಜೆ ವೇಳೆಗೆ ಗೂಡ್ಸ್ ರೈಲು ಹಾಳಾಗಿ ಹಳಿ ಮೇಲೆಯೇ ನಿಂತ ಕಾರಣದಿಂದಾಗಿ ಇದೇ ದಾರಿಯಲ್ಲಿ ಸಾಗಬೇಕಿದ್ದ ಬೆಂಗಳೂರು- ಮುರ್ಡೇಶ್ವರ ರೈಲು ಸಂಚಾರಕ್ಕೆ ಒಂದು ಗಂಟೆಗೂ ಅಧಿಕ ಕಾಲ ವ್ಯತ್ಯಯವಾಗಿತ್ತು.
ಜೋಕಟ್ಟೆಯಲ್ಲಿ ಸಂಚರಿಸುತ್ತಿದ್ದ ಗೂಡ್ಸ್ ರೈಲು ತಾಂತ್ರಿಕ ದೋಷದಿಂದ ಕೆಟ್ಟು ನಿಂತಿದೆ. ಅದೇ ದಾರಿಯಾಗಿ ಸಾಗಬೇಕಿದ್ದ ಬೆಂಗಳೂರು- ಮುರ್ಡೇಶ್ವರ ರೈಲು ಮುಂದೆ ಸಂಚರಿಸಲು ಸಾಧ್ಯವಾಗದೆ ಸ್ಥಗಿತಗೊಂಡಿತು. ಇದರಿಂದಾಗಿ ಪ್ರಯಾಣಿಕರ ರೈಲು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು ಎಂದು ತಿಳಿದು ಬಂದಿದೆ.