×
Ad

ನಟ, ಮಾಡೆಲ್ ಆದಿತ್ಯ ಸಿಂಗ್ ರಜಪೂತ್ ಮೃತದೇಹ ಪತ್ತೆ

Update: 2023-05-22 23:26 IST

ಮುಂಬೈ, ಮೇ 22: ನಟ, ಮಾಡೆಲ್ ಹಾಗೂ ತಾರಾಗಣ ಸಮನ್ವಯಕಾರ ಆದಿತ್ಯ ಸಿಂಗ್ ರಜಪೂತ್ (32) ಅವರ ಮೃತದೇಹ ಮುಂಬೈಯ ಅಂಧೇರಿಯಲ್ಲಿರುವ ಅವರ ಅಪಾರ್ಟ್ಮೆಂಟ್ನಲ್ಲಿ ಪತ್ತೆಯಾಗಿದೆ.

ಕಳೆದ ಎರಡು ದಿನಗಳಿಂದ ರಜಪೂತ್ ಅವರ ಆರೋಗ್ಯ ಸರಿ ಇರಲಿಲ್ಲ. ಒಶಿವಾರಾ ಪ್ರದೇಶದಲ್ಲಿರುವ ಅವರ ಅಪಾರ್ಟ್ಮೆಂಟ್ನಲ್ಲಿರುವ ಸ್ನಾನದ ಕೊಠಡಿಯಲ್ಲಿ ಅವರ ಸೋಮವಾರ ಅಪರಾಹ್ನ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಜಪೂತ್ ಅವರು ಕುಸಿದು ಬಿದ್ದಿರುವುದನ್ನು ಮನೆ ಕೆಲಸದಾಕೆ ಗಮನಿಸಿದ್ದಳು. 

ಕಟ್ಟಡದ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಳು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ಅವರು ತಿಳಿಸಿದ್ದಾರೆ. ‘‘ರಜಪೂತ್ ಅವರ ಸಾವಿನಲ್ಲಿ ನಮಗೆ ಇದುವರೆಗೆ ಯಾವುದೇ ಸಂದೇಹಾಸ್ಪದ ಅಂಶಗಳು ಪತ್ತೆಯಾಗಿಲ್ಲ. ಆಕಸ್ಮಿಕ ಸಾವು ವರದಿ ದಾಖಲಿಸಲಾಗಿದೆ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Similar News