ಮೇ 25: ಮೂಡ್ಲಕಟ್ಟೆ ಎಂಐಟಿಕೆಯಲ್ಲಿ ‘ಯುವ-2023’

Update: 2023-05-23 13:58 GMT

ಕುಂದಾಪುರ, ಮೇ 23: ಇಲ್ಲಿಗೆ ಸಮೀಪದ ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್  ಆಫ್ ಟೆಕ್ನಾಲಜಿಯ  ಎಂಬಿಎ ವಿಭಾಗದ ವತಿಯಿಂದ ‘ಯುವ-2023’ ರಾಜ್ಯಮಟ್ಟದ ಅಂತರಕಾಲೇಜು ಮ್ಯಾನೇಜ್‌ಮೆಂಟ್ ಮತ್ತು ಸಾಂಸ್ಕೃತಿಕ ಹಬ್ಬ ಮೇ 25ರ ಗುರುವಾರ ಕಾಲೇಜಿನ ಆವರಣದಲ್ಲಿ ನಡೆಯಲಿದೆ. 

ಆಹ್ವಾನಿತ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ತಮ್ಮ ವ್ಯಾವಹಾರಿಕ ಮತ್ತು ಸಾಂಸ್ಕೃತಿಕ ಕೌಶಲ್ಯಗಳನ್ನು ಪ್ರದರ್ಶಿಸಲು ಹಾಗೂ ಸ್ಪರ್ಧಾತ್ಮಕ ಮನೋಭಾವನೆಯನ್ನು ಉತ್ತೇಜಿಸಲು ಯುವ ಒಂದು ಉತ್ತಮ ವೇದಿಕೆಯಾಗಲಿದೆ. 

ಉಡಾನ್ (ಬಿಸಿನೆಸ್ ಪ್ಲಾನ್) ಆ್ಯಡ್‌ಮ್ಯಾಡ್, ಚದುರಂಗ (ಬಿಸಿನೆಸ್ ಕ್ವಿಜ್), 100 ಕಾಫಂಡ್ ಹಾಗೂ ಹ್ಯಾಷ್ ಟ್ಯಾಗ್ ಸ್ಪರ್ಧೆಗಳು ವ್ಯವಹಾರ ಚತುರತೆಯನ್ನು ಉತ್ತೇಜಿಸಿದರೆ, ಯುವ ಪರಂಪರಾ ಸಂಪ್ರದಾಯಕವಾದ ಸಾಂಸ್ಕೃತಿಕ ವೈಭೋಗದ ಮೇಲೆ ಬೆಳಕು ಚೆಲ್ಲಲಿದೆ. ನೃತ್ಯ, ಹಾಡುಗಾರಿಕೆ, ಮೈಮ್, ನಾಟಕ ಮತ್ತು ಪ್ಯಾಷನ್ ಶೋ ಸ್ಪರ್ಧೆಗಳು ಇದರೊಂದಿಗೆ  ಮೂಡಿಬರಲಿವೆ.

ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಉಡುಪಿ ಅಜ್ಜರಕಾಡಿನ ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಭಾಸ್ಕರ್ ಶೆಟ್ಟಿ ಎಸ್. ಆಗಮಿಸಲಿದ್ದಾರೆ. ಸಂಜೆಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಕೆನರಾ ಬ್ಯಾಂಕಿನ ಡಿಜಿಎಂ ಎಚ್. ಕೆ. ಗಂಗಾಧರ್ ಭಾಗವಹಿಸಲಿದ್ದಾರೆ. ಅಧ್ಯಕ್ಷತೆ ಯನ್ನು ಐಎಂಜೆ ವಿದ್ಯಾಸಂಸ್ಥೆಗಳ ಚೇರ್‌ಮೆನ್ ಸಿದ್ಧಾರ್ಥ ಜೆ ಶೆಟ್ಟಿ ವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Similar News