×
Ad

ಮಂಗಳೂರು: ಬಾಡಿಗೆ ಮನೆ ನೆಪದಲ್ಲಿ ವಂಚನೆ ಆರೋಪ; ದೂರು ದಾಖಲು

Update: 2023-05-23 19:40 IST

ಮಂಗಳೂರು, ಮೇ 23: ತಾನು ಭಾರತೀಯ ಸೇನೆಯಲ್ಲಿ ಉದ್ಯೋಗಿ ಎಂದು ನಂಬಿಸಿದ ವ್ಯಕ್ತಿಯೊಬ್ಬ ಬಾಡಿಗೆ ಮನೆಯ ನೆಪದಲ್ಲಿ  99 ಸಾವಿರ ರೂ. ವಂಚಿಸಿರುವ ಬಗ್ಗೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೇ 22ರಂದು ದೂರುದಾರರು ಬಾಡಿಗೆ ಮನೆ ಇರುವ ಬಗ್ಗೆ ಆ್ಯಪ್‌ವೊಂದರಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ನೋಡಿದ ವ್ಯಕ್ತಿಯೊಬ್ಬ ಮೊಬೈಲ್‌ನಿಂದ ಕರೆ ಮಾಡಿ ‘ನಾನು ಭಾರತೀಯ  ಸೇನೆಯಲ್ಲಿರುವುದಾಗಿ ಪರಿಚಯಿಸಿಕೊಂಡು, ತನಗೆ ಬಾಡಿಗೆ ಮನೆ ಬೇಕಾಗಿದೆ. ನನ್ನ ಸರಕಾರಿ ಕಚೇರಿಯ ಖಾತೆಯಿಂದ ಹಣ ವರ್ಗಾವಣೆ ಮಾಡುತ್ತೇನೆ’ ಎಂದಿದ್ದಾನೆ.

ತಾನು ಹಣ ವರ್ಗಾವಣೆ ಮಾಡಬೇಕಾದರೆ ನೀವು 55 ಸಾವಿರ ರೂ. ಪಾವತಿಸಬೇಕು ಎಂದಿದ್ದಾರೆ. ಅದನ್ನು ನಂಬಿದ ದೂರುದಾರರು ಹಂತ ಹಂತವಾಗಿ 99 ಸಾವಿರ ರೂ.ವನ್ನು ಬ್ಯಾಂಕ್ ಖಾತೆಯಿಂದ ವರ್ಗಾಯಿಸಿಕೊಂಡು ವಂಚನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

Similar News