ಎಸ್‌ವೈಎಸ್ 70ನೆ ಸಮ್ಮೇಳನದ ಸ್ವಾಗತ ಸಮಾವೇಶ

Update: 2023-05-23 14:25 GMT

ಪುತ್ತೂರು, ಮೇ 23: ಎಸ್‌ವೈಎಸ್ 70ನೆ ಸಮ್ಮೇಳನ-2024ರ ಪ್ರಚಾರಾರ್ಥ ಸಮಿತಿಯು ಹಮ್ಮಿಕೊಂಡ ಜಾಗೃತಿ ಯಾತ್ರೆಯನ್ನು ಸ್ವಾಗತಿಸುವ ಸಲುವಾಗಿ ದ.ಕ.ಜಿಲ್ಲಾ ಎಸ್‌ವೈಎಸ್ ಸಮಿತಿ ಮಾಡನ್ನೂರು ನಸ್ರತುಲ್ ಇಸ್ಲಾಂ ಮಸೀದಿಯ ವಠಾರದಲ್ಲಿ  ಆಯೋಜಿಸಿದ್ದ  ಸ್ವಾಗತ ಸಮಾವೇಶವು ಸೋಮವಾರ ನಡೆಯಿತು.

ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಅಸ್ಸೆಯ್ಯದ್ ಝೈನುಲ್ ಆಬಿದೀನ್ ತಂಳ್ ಸಮಾವೇಶ ಉದ್ಘಾಟಿಸಿದರು. ಜಿಲ್ಲಾ ಸಮಿತಿಯ ಅಧ್ಯಕ್ಷ ಯುಕೆ ಅಬ್ದುಲ್ ಅಝೀಝ್ ದಾರಿಮಿ ಅಧ್ಯಕ್ಷತೆ ವಹಿಸಿದ್ದರು.

ಸುನ್ನಿ ಆದರ್ಶ, ಆಧ್ಯಾತ್ಮಿಕ, ಸಾಂಘಿಕ, ಭ್ರಾತೃತ್ವ ಎಂಬ ವಿಷಯಗಳ ಬಗ್ಗೆ ಕ್ರಮವಾಗಿ ಅಬ್ದುಲ್ ಹಮೀದ್ ಫೈಝಿ ಅಂಬಲಕ್ಕಡವು, ಮುಸ್ತಫಾ ಮುಂಡುಪಾರ, ಹಂಝ ರಹ್ಮಾನಿ ವಿಷಯ ಮಂಡಿಸಿದರು.

ಯಾತ್ರೆಯಲ್ಲಿ ಕೆಕೆಎಸ್ ತಂಙಳ್, ನಿರ್ದೇಶಕ ಎಎಂ ಫರೀದ್, ನಿಸಾರ್, ಹಸನ್, ಇಸ್ಮಾಯಿಲ್ ಹಾಜಿ, ಮುಹಮ್ಮದ್ ಕುಂಞಿಪ್ಪ್, ಸಿಕೆಕೆ ಮಾಣಿಯೂರ್ ಜೊತೆಯಾಗಿದ್ದರು.

ಯಾತ್ರೆಯ ನಾಯಕರಾದ ಅಸ್ಸೆಯ್ಯದ್ ಮುಹಮ್ಮದ್ ಕೋಯ ಜುಮಲುಲ್ಲೈಲಿ ತಂಳ್‌ರನ್ನು ಅಸ್ಸೆಯ್ಯದ್ ಝೈನುಲ್ ಆಬಿದೀನ್ ತಂಳ್ ಶಾಲು ಹೊದಿಸಿ ಬರಮಾಡಿಕೊಂಡರು.

ಕೊಡಗಿನಿಂದ ತಿರುವನಂತಪುರತನಕ ಸಾಗುವ ಯಾತ್ರೆಯ ಮಹತ್ವದ ಬಗ್ಗೆ ತಿಳಿಸಿದ ತಂಳ್ ‘ಸಹಿಷ್ಣುತೆಯೊಂದಿಗೆ ಜಾತ್ಯತೀತ ಪರಂಪರೆಯನ್ನು ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು.

ನೂರುಲ್ ಹುದಾ ಪ್ರಾಂಶುಲಾಲ ಹನೀಫ್  ಹುದವಿ, ಖತೀಬ್ ಇಸ್ಮಾಯಿಲ್ ಫೈಝಿ,  ಶರೀಫ್ ಫೈಝಿ, ಸ್ವಾಗತ ಸಮಿತಿಯ ಗೌರವ ಅಧ್ಯಕ್ಷ ಬಶ್ರಾ ಅಝೀಝ್ ಹಾಜಿ, ಮಾಡನ್ನೂರು ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ಹಾಜಿ ನೆಕ್ಕರೆ, ಖತರ್ ಇಬ್ರಾಹೀಂ ಹಾಜಿ, ರಶೀದ್ ಹಾಜಿ ಪರ್ಲಡ್ಕ, ಇಬ್ರಾಹೀಂ ದಾರಿಮಿ, ಖಲೀಲ್ ಅರ್ಷದಿ, ಶಂಸುದ್ದೀನ್ ದಾರಿಮಿ, ಶಾಫಿ ದಾರಿಮಿ, ಮಾಡನ್ನೂರು ರಫೀಕ್ ಫೈಝಿ, ಅಬ್ದುಲ್ಲಾ ನಯೀಮಿ, ನಝೀರ್ ಅರ್ಷದಿ, ಬಾತಿಷ್ ಪಾಟ್ರೋಡಿ ಭಾಗವಹಿಸಿದ್ದರು.

ಜಿಲ್ಲಾ ಕಾರ್ಯದರ್ಶಿ ಕೆಎಲ್ ದಾರಿಮಿ ಸ್ವಾಗತಿಸಿದರು. ಕೆಎಂಎ ಕೊಡುಂಗಾಯಿ ವಂದಿಸಿದರು.

Similar News