ಬಬ್ಬುಕಟ್ಟೆ: ಹಿರಾ ವಿಮೆನ್ಸ್ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ
ಮಂಗಳೂರು, ಮೇ 23: ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆಯ ಹಿರಾ ವಿಮೆನ್ಸ್ ಕಾಲೇಜಿನ 2022ನೇ ಬ್ಯಾಚ್‌ನ ವಿದ್ಯಾರ್ಥಿನಿಯರ ಪದವಿ ಪ್ರದಾನ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಶೈಕ್ಷಣಿಕ ವರ್ಷದಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪದವಿ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ವಿವಿ ಇಲೆಕ್ಟ್ರಾನಿಕ್ಸ್ ವಿಭಾಗದ ಪ್ರೊ. ಡಾ.ಎ.ಎಂ.ಖಾನ್ ‘ನಾವು ವ್ಯಕ್ತಿಗಳಾಗಿ ಸೀಮಿತವಾಗಿರದೆ, ವ್ಯಕ್ತಿತ್ವವಾಗಿ ಬದಲಾಗಬೇಕು. ವ್ಯಕ್ತಿತ್ವವಾಗಿ ಬದಲಾಗಲು ನಮಗೆ ವಿದ್ಯೆ ಸಹಕಾರಿಯಾಗಲಿದೆ. ಹಾಗಾಗಿ ವಿದ್ಯೆಯ ಮಹತ್ವವನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದರು.
ಡಾ. ಸಯ್ಯದ್ ಕಾಝಿಮ್ ಶುಭ ಹಾರೈಸಿದರು. ಶಾಂತಿ ಎಜುಕೇಶನ್ ಟ್ರಸ್ಟ್‌ನ ಉಪಾಧ್ಯಕ್ಷ ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಆಂಗ್ಲ ವಿಭಾಗದ ಮುಖ್ಯಸ್ಥೆ ಎಲಿಝಾರಾವೊ ವಿದ್ಯಾರ್ಥಿನಿಯರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಅರಬಿಕ್ ಮತ್ತು ಇಸ್ಲಾಮಿಕ್ ಸ್ಟಡೀಸ್‌ನ ಮುಖ್ಯಸ್ಥ ಶೋಹೆಬ್ ಹುಸೈನ್ ನದ್ವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಶಾಂತಿ ಎಜುಕೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಕೆ.ಎಂ.ಶರೀಫ್, ಟ್ರಸ್ಟ್‌ನ ಅಧ್ಯಕ್ಷ ಎ.ಎಚ್. ಮೆಹಮೂದ್, ಹಿರಾ ಶಿಕ್ಷಣ ಸಂಸ್ಥೆಯ ಸಂಚಾಲಕ ರಹಮ್ಮತುಲ್ಲಾಹ್, ಉದ್ಯಮಿ ಮೆಹೂಝುರ್ ರಹ್ಮಾನ್, ಟ್ರಸ್ಟ್‌ನ ಕಾರ್ಯದರ್ಶಿ ಕರೀಂ, ಹಿರಾ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಝಾಕಿರ್ ಹುಸೈನ್, ಟ್ರಸ್ಟಿಗಳಾದ ಹನೀಫ್, ಉಮ್ಮರ್ ಬಾವಾ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಅಹ್ಮದ್ ಬಶೀರ್ ಉಪಸ್ಥಿತರಿದ್ದರು.
ಪ್ರಾಂಶುಪಾಲೆ ಭಾಗೀರಥಿ ಸ್ವಾಗತಿಸಿದರು. ವಿದ್ಯಾರ್ಥಿನಿಗಳಾದ ಹಝೀಕಾ ಮರಿಯಂ, ಫಹೀಮಾ ಮುಸ್ತಾಕ್ ಕಾರ್ಯಕ್ರಮ ನಿರೂಪಿಸಿದರು. ಹಲೀಮಾ ಝಿಕ್ರಾ, ಹಲೀಮಾ ನೌಶೀನ್ ಕಿರಾಅತ್ ಪಠಿಸಿದರು. ಪರ್ಹಾನಾ, ಮೌಲ್ಯಾ ವಂದಿಸಿದರು.