×
Ad

ನಬ್ಲಸ್: ನಿರಾಶ್ರಿತ ಶಿಬಿರದ ಮೇಲೆ ಇಸ್ರೇಲ್ ಸೇನೆ ದಾಳಿ; ಮೂವರು ಫೆಲೆಸ್ತೀನಿಯರ ಹತ್ಯೆ

Update: 2023-05-23 22:53 IST

ಟೆಲ್ಅವೀವ್,ಮೇ 22: ಆಕ್ರಮಿತ ಪಶ್ಚಿಮದಂಡೆ ಪ್ರದೇಶದಲ್ಲಿರುವ ನಿರಾಶ್ರಿತ ಶಿಬಿರವೊಂದರ ಮೇಲೆ ಸೋಮವಾರ ಇಸ್ರೇಲಿ ಪಡೆಗಳು ದಾಳಿ ನಡೆಸಿ ಮೂವರು ಫೆಲೆಸ್ತೀನ್ ಹೋರಾಟಗಾರರನ್ನು ಹತ್ಯೆಗೈದಿವೆ. ಶಂಕಿತ ಭಯೋತ್ಪಾದಕರನ್ನು ಗುರಿಯಿರಿಸಿ ಈ ಕಾರ್ಯಾಚರಣೆಯನ್ನು ನಡೆಸಲಾಗಿತ್ತೆಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ.

ನಬ್ಲಸ್ ನ ಬಲಾಟಾ ನಿರಾಶ್ರಿತ ಶಿಬಿರದಲ್ಲಿ ಹತ್ಯೆಗೀಡಾದ ಮೂವರು ಫೆಲೆಸ್ತೀನಿಯರನ್ನು ಮುಹಮ್ಮದ್ ಅಬು ಝೈತೂನ್ (32), ಫಾಧಿ ಅಬು ರಿಝ್ಕಾ (30) ಹಾಗೂ ಅಬ್ದುಲ್ಲಾ ಅಬು ಹಮ್ದಾನ್ (24) ಎಂದು ಗುರುತಿಸಲಾಗಿದೆ.

ಮೃತಪಟ್ಟ ಮೂವರು ಯುವಕರು ತನ್ನ ಗುಂಪಿನ ಹೋರಾಟಗಾರರೆಂದು ಫೆಲೆಸ್ತೀನ್ ಅಧ್ಯಕ್ಷ ಮಹಮ್ಮೂದ್ ಅಬ್ಬಾಸ್ ಅವರ ಫತಾಹ್ ಪಕ್ಷದ ಅಲ್ಅಕ್ಸಾ ಹುತಾತ್ಮರ ಬ್ರಿಗೇಡ್ ತಿಳಿಸಿದೆ.

ಪಶ್ಚಿಮದಂಡೆಯ ನಬ್ಲಸ್ ನಲ್ಲಿ ತಾನು ನಡೆಸಿದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ಸಂದರ್ಭದಲ್ಲಿ ಭುಗಿಲೆದ್ದ ಗುಂಡಿನ ಕಾಳಗದಲ್ಲಿ ಹಲವಾರು ಮಂದಿ ಹೋರಾಟಗಾರರಿಗೆ ಗುಂಡಿಕ್ಕಿರುವುದಾಗಿ ಇಸ್ರೇಲಿ ಸೇನೆ ತಿಳಿಸಿದೆ.

Similar News