×
Ad

ರೇಷನಿಂಗ್ ಯಥಾಸ್ಥಿತಿ ಮುಂದುವರಿಕೆ : ಮಂಗಳೂರು ಮಹಾನಗರ ಪಾಲಿಕೆ

ತುಂಬೆಯಲ್ಲಿ 2.98 ಮೀಟರ್ ನೀರು ಸಂಗ್ರಹ

Update: 2023-05-24 18:34 IST

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತಿಂಗಳಿನಿಂದೀಚೆಗೆ 2 ದಿನಕ್ಕೊಮ್ಮೆ  ನೀರಿನ ರೇಷನಿಂಗ್ ನಡೆಯುತ್ತಿದ್ದು, ಸುರತ್ಕಲ್ ಹಾಗೂ ಮಂಗಳೂರು ನಗರ ಪ್ರದೇಶಗಳಿಗೆ ನೀರು ಪೂರೈಸಲಾಗುತ್ತಿದೆ.  ಜಿಲ್ಲೆಯ ಕೆಲವೊಂದೆಡೆ ಸಾಧಾರಣ ಮಳೆಯಾದರೂ, ಪ್ರಸ್ತುತ ತುಂಬೆ ಅಣೆಕಟ್ಟಿನಲ್ಲಿ 2.98 ಮೀಟರ್ ನೀರು ಸಂಗ್ರಹವಾಗಿ ನೀರಿನ ಮಟ್ಟ ಕುಸಿದಿದೆ ಎನ್ನಬಹುದು.

ತುಂಬೆ ಡ್ಯಾಂನಲ್ಲಿ 2.98 ಮೀಟರ್ ನೀರು ಇದ್ದು, ಎಎಂಆರ್ ಡ್ಯಾಂನಲ್ಲಿ 16.74 ನೀರು ಸಂಗ್ರಹವಾಗಿದೆ. ಸದ್ಯ ಎಎಂಆರ್ ಡ್ಯಾಂನಲ್ಲಿ ಅಲ್ಪ ಪ್ರಮಾಣದ ನೀರು ಇರುವುದರಿಂದ ಬೆರಳೆನಿಕೆಯಷ್ಟು ದಿನಗಳಿಗೆ ನೀರು ಸಾಕಾಗಬಹುದು.  ಈ ತಿಂಗಳ ಕೊನೆಯಲ್ಲಿ ಅಥವಾ ಜೂನ್ ಮೊದಲ ವಾರ ಮುಂಗಾರು ಪ್ರವೇಶಿಸಲಿದ್ದು, ಇನ್ನೇನು ಎರಡು ಮೂರು ವಾರದಲ್ಲಿ ಭಾರೀ ಮಳೆ ಸುರಿಯುವ ನಿರೀಕ್ಷೆ ಮಾಡಲಾಗಿದೆ. ಜಿಲ್ಲೆಯ ಅನೇಕ ನದಿ ಕೆರೆಗಳು ಬತ್ತಿ ಹೋಗಿವೆ.

ಜಿಲ್ಲೆಯಲ್ಲಿ ಈವರೆಗೂ ಅಲ್ಪ ಪ್ರಮಾಣದ ಮಳೆ ಸುರಿದಿದ್ದು, ವಾಡಿಕೆಯಂತೆ ಹೆಚ್ಚಿನ ಮಟ್ಟದಲ್ಲಿ ಮಳೆ ಸುರಿದಿಲ್ಲ. ಈ ಕಾರಣಕ್ಕಾಗಿ ತುಂಬೆ ಹಾಗೂ ಇತರ ಡ್ಯಾಂನಲ್ಲಿ ಮೇ ತಿಂಗಳು ಮುಗಿಯುತ್ತಿದ್ದರೂ, ಡ್ಯಾಂಗಳು ಇನ್ನೂ ತುಂಬುತ್ತಿಲ್ಲ. ಅದ್ದರಿಂದ ರೇಷನಿಂಗ್ ಹಿಂದಿನಂತೆ ಮುಂದುವರಿಸಲಾಗುವುದು. ಮಳೆ ಬಂದರೆ ರೇಷನಿಂಗ್ ಬಂದ್. ನೀರಿನ ಕೊರತೆಯಾದಲ್ಲಿ ದೂ.ಸಂಖ್ಯೆ: 222306 ಅಥವಾ 222303 ಅನ್ನು ಸಂಪರ್ಕಿಸಬಹುದು.
-ಚೆನ್ನ ಬಸಪ್ಪ, ಆಯುಕ್ತ, ಮಹಾನಗರ ಪಾಲಿಕೆ, ಮಂಗಳೂರು 

Similar News