×
Ad

ಮಂಗಳೂರು: ಕಾರಾಗೃಹದ ಸಿಬ್ಬಂದಿ ಅಮಾನತು

Update: 2023-05-24 20:14 IST

ಮಂಗಳೂರು: ಕೈದಿಗೆ ಗಾಂಜಾ ಪೂರೈಕೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟ ನಗರದ ಕೋಡಿಯಾಲ್‌ ಬೈಲ್‌ನಲ್ಲಿರುವ ಜಿಲ್ಲಾ ಕಾರಾಗೃಹದ ಸಿಬ್ಬಂದಿ ಪ್ರಕಾಶ್ ಗಾವಡೆ ಎಂಬಾತನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಕಾರಾಗೃಹದಲ್ಲಿ ಕೆಐಎಸ್‌ಎಫ್ ಸಿಬ್ಬಂದಿ ತಪಾಸಣೆ ಮಾಡುವಾಗ ಪ್ರಕಾಶ್ ಗಾವಡೆ ಬಳಿ ಗಾಂಜಾ ಪತ್ತೆಯಾಗಿತ್ತು. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಇದೀಗ ಅಮಾನತುಗೊಳಿಸಲಾಗಿದೆ.

Similar News