×
Ad

ಶಾಹಿ ಈದ್ಗಾ ಪ್ರಕರಣ: ಎಲ್ಲಾ ಅರ್ಜಿಗಳನ್ನು ಅಲಹಾಬಾದ್‌ ಹೈಕೋರ್ಟಿಗೆ ವರ್ಗಾಯಿಸಲು ಸೂಚನೆ

Update: 2023-05-27 16:04 IST

ಅಲಹಾಬಾದ್: ಮಥುರಾ ನ್ಯಾಯಾಲಯದಲ್ಲಿ ಶಾಹಿ ಈದ್ಗಾ ಮಸೀದಿ ವಿವಾದ ಕುರಿತ ಎಲ್ಲಾ ಬಾಕಿ ಪ್ರಕರಣಗಳನ್ನು  ಅಲಹಾಬಾದ್‌ ಹೈಕೋರ್ಟಿಗೆ ವರ್ಗಾಯಿಸಬೇಕೆಂದು ಹೈಕೋರ್ಟ್‌ ಶುಕ್ರವಾರ ಸೂಚನೆ ನೀಡಿದೆ.

ಈ ಮಸೀದಿಯು ಶ್ರೀ ಕೃಷ್ಣನ ಜನ್ಮಸ್ಥಾನದಲ್ಲಿ ನಿರ್ಮಿಸಲ್ಪಟ್ಟಿದೆ, ಮಸೀದಿಯ ಜಾಗವಾದ 13.37 ಎಕರೆ ತಮಗೆ ಸೇರಿದ್ದು ಎಂದು ಅರ್ಜಿದಾರರು ವಾದಿಸಿದ್ದಾರೆ.

ಪ್ರಕರಣಗಳನ್ನು ವರ್ಗಾಯಿಸಬೇಕೆಂದು ರಂಜನಾ ಅಗ್ನಿಹೋತ್ರಿ ಮತ್ತು ಇತರ ಏಳು ಮಂದಿ ಸಲ್ಲಿಸಿದ ಅರ್ಜಿಗೆ ಅಲಹಾಬಾದ್‌ ಹೈಕೋರ್ಟಿನ ಜಸ್ಟಿಸ್‌ ಅರವಿಂದ್‌ ಕುಮಾರ್‌ ಮಿಶ್ರಾ ಶುಕ್ರವಾರ  ಅನುಮತಿಸಿದರು. ಬಾಬ್ರಿ ಮಸೀದಿ ಪ್ರಕರಣದ ವಿಚಾರಣೆಯ ಮಾದರಿಯಲ್ಲಿಯೇ ಹೈಕೋರ್ಟ್‌ ಈ ಪ್ರಕರಣದ ವಿಚಾರಣೆ ನಡೆಸಬೇಕು ಎಂದು ಅರ್ಜಿದಾರರು ಕೋರಿದ್ದರು.

ಸಿವಿಲ್‌ ನ್ಯಾಯಾಲಯದ ಮುಂದೆ ಈ ವಿಚಾರದ 10 ಪ್ರಕರಣಗಳಿವೆ ಹಾಗೂ ಇದು ಸಾರ್ವಜನಿಕವಾಗಿ ಮಹತ್ವದ ವಿಚಾರವಾಗಿದ್ದರೂ ಕಳೆದ ಎರಡು ಮೂರು ವರ್ಷಗಳಲ್ಲಿ ಯಾವುದೇ ಪ್ರಗತಿ ಕಂಡಿಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

Similar News