ಬಾಲಕಿ ಆತ್ಮಹತ್ಯೆ

Update: 2023-05-27 16:07 GMT

ಕೋಟ: ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 26ರಂದು ಮಧ್ಯಾಹ್ನ ವೇಳೆ ಬಿಲ್ಲಾಡಿ ಗ್ರಾಮದ ಬನ್ನೇರಳಕಟ್ಟೆ ಎಂಬಲ್ಲಿ ನಡೆದಿದೆ.

ಮೃತರನ್ನು ಬನ್ನೇರಳಕಟ್ಟೆಯ ಕೃಷ್ಣ ಮತ್ತು ಮಂಜುಳ ದಂಪತಿ ಪುತ್ರಿ ಪ್ರಿಯ (13) ಎಂದು ಗುರುತಿಸಲಾಗಿದೆ.

ಒಬ್ಬಳೆ ಮನೆಯಲ್ಲಿದ್ದ ಪ್ರಿಯಾ, ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News