​ಮಂಗಳೂರು ವಿಮಾನ ಯಾನ ಸೇವೆ ವಿಳಂಬ

ರನ್‌ವೇ ಲೈಟಿಂಗ್‌ನ ತಾಂತ್ರಿಕ ಸಮಸ್ಯೆ

Update: 2023-05-28 16:36 GMT

ಮಂಗಳೂರು, ಮೇ 28: ಮಂಗಳೂರು ವಿಮಾನ ನಿಲ್ದಾಣದ ರನ್‌ವೇ ಲೈಟಿಂಗ್‌ನ ತಾಂತ್ರಿಕ ಸಮಸ್ಯೆಯಿಂದಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರವಿವಾರ ರಾತ್ರಿ ವಿಮಾನಗಳ ಅಗಮನ ಮತ್ತು ನಿರ್ಗಮನ ಸೇವೆಯಲ್ಲಿ ವಿಳಂಬವಾಗಿದೆ.

ಮುಂಬೈಯಿಂದ ಆಗಮಿಸಬೇಕಿದ್ದ ಇಂಡಿಗೊ (ವಿಮಾನ ಸಂಖ್ಯೆ 6E5188)ವನ್ನು ಕಣ್ಣೂರಿಗೆ ತಿರುಗಿಸಲಾಯಿತು. ಬಹರೈನ್‌ಗೆ ತೆರಳಬೇಕಿದ್ದ IX 789 ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ನಿರ್ಗಮನವನ್ನು ತಡೆ ಹಿಡಿಯಲಾಗಿತ್ತು. (ನಿಗದಿತ ನಿರ್ಗಮನ ರಾತ್ರಿ 8:05).  ಚೆನ್ನೈ ಮತ್ತು ಬೆಂಗಳೂರಿನಿಂದ ವಿಮಾನಗಳ ಆಗಮನ ವಿಳಂಬವಾಗಿತ್ತು.

ರಾತ್ರಿ 7:30ಕ್ಕೆ ಸಮಸ್ಯೆ ಕಂಡುಬಂದಿದ್ದು, ದುರಸ್ತಿಪಡಿಸಿದ ಬಳಿಕ ವಿಮಾನ ಯಾನ ಸೇವೆ ಯಥಾಸ್ಥಿತಿಗೆ ಮರಳಿದೆ ಎಂದು ಮೂಲಗಳು ತಿಳಿಸಿವೆ.

Similar News