ನೂತನ ಸಂಸತ್ ಭವನ ಉದ್ಘಾಟನೆ ಸ್ಮರಣಾರ್ಥ: ಪ್ರಧಾನಿಯಿಂದ 75 ರೂ. ನಾಣ್ಯ, ಅಂಚೆ ಚೀಟಿ ಬಿಡುಗಡೆ

Update: 2023-05-28 17:10 GMT

ಹೊಸದಿಲ್ಲಿ, ಮೇ 28: ನೂತನ ಸಂಸತ್ ಭವನದ ಉದ್ಘಾಟನೆಯ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ 75 ರೂಪಾಯಿಯ ನಾಣ್ಯ ಹಾಗೂ ವಿಶೇಷ ಅಂಚೆ ಚೀಟಿ ಬಿಡುಗಡೆಗೊಳಿಸಿದರು. ನೂತನ ಸಂಸದ್ ಭವನದ ಲೋಕಸಭೆಯ ಸಭಾಂಗಣದಲ್ಲಿ ಪ್ರಧಾನಿ ಅವರು 75 ರೂಪಾಯಿಯ ನಾಣ್ಯ ಹಾಗೂ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದರು. 

ಕೇಂದ್ರ ಹಣಕಾಸು ವ್ಯವಹಾರ ಸಚಿವಾಲಯದ ಅಡಿಯಲ್ಲಿರುವ ಆರ್ಥಿಕ ವ್ಯವಹಾರಗಳ ಇಲಾಖೆಯ ಗಝೆಟ್ ಅಧಿಸೂಚನೆ ಪ್ರಕಾರ, ನಾಣ್ಯದ ತೂಕ 34.65ರಿಂದ 35.35 ಇರಲಿದೆ. 

ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭದ ಸಿಂಹದ ಚಿತ್ರವಿದೆ. ಅದರ ಸುತ್ತಲೂ ದೇವ ನಾಗರಿ ಲಿಪಿಯಲ್ಲಿ ‘‘ಭಾರತ್’’ ಹಾಗೂ ಇಂಗ್ಲೀಷ್‌ನಲ್ಲಿ  ‘‘ಇಂಡಿಯಾ’’ ಎಂದು ಬರೆಯಲಾಗಿದೆ. ಸಿಂಹದ ಲಾಂಛನದ ಕೆಳಗೆ 75 ಅಂಕೆ ಹಾಗೂ ರೂಪಾಯಿ ಚಿಹ್ನೆಯನ್ನು ಮುದ್ರಿಸಲಾಗಿದೆ. ನಾಣ್ಯದ ಇನ್ನೊಂದು ಬದಿಯಲ್ಲಿ ಸಂಸತ್ ಭವನದ ಚಿತ್ರ ಇದೆೆ ಹಾಗೂ 2023 ಇಸವಿಯನ್ನು ಮುದ್ರಿಸಲಾಗಿದೆ. 

Similar News