ಪರಮಾಣು ವಿಕಿರಣ ಸೋರಿಕೆಗೆ ಪುಟಿನ್ ಯೋಜನೆ: ಉಕ್ರೇನ್ ಆರೋಪ

Update: 2023-05-28 17:51 GMT

ಕೀವ್, ಮೇ 28: ರಶ್ಯದ ವಶದಲ್ಲಿರುವ ಝಪೋರಿಝಿಯಾ ಪರಮಾಣು ಸ್ಥಾವರದಲ್ಲಿ ಪರಮಾಣು ವಿಕಿರಣ ಸೋರಿಕೆಯ ಮೂಲಕ ಉಕ್ರೇನ್‌ನ ಪ್ರತಿದಾಳಿಯನ್ನು ಮುಂದೂಡಲು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಯೋಜನೆ ರೂಪಿಸಿದ್ದಾರೆ ಎಂದು ಉಕ್ರೇನ್ ನ ಗುಪ್ತಚರ ವಿಭಾಗ ಪ್ರತಿಪಾದಿಸಿದೆ.

ಝಪೋರಿಝಿಯಾ ಪರಮಾಣು ಸ್ಥಾವರದ ಮೇಲೆ ತನ್ನ ಪಡೆಗಳಿಂದ  ದಾಳಿ ನಡೆಸುವುದು. ಆ ಬಳಿಕ ಪರಮಾಣು ವಿಕಿರಣ ಸೋರಿಕೆಯಾಗಿದೆ ಎಂದು ವರದಿ ಪ್ರಕಟಿಸಿ ಅಂತರಾಷ್ಟ್ರೀಯ ತನಿಖೆಗೆ ಒತ್ತಾಯಿಸುವುದು . ಅಂತರಾಷ್ಟ್ರೀಯ ತನಿಖೆ ಮುಗಿಯುವವರೆಗೆ  ಉಕ್ರೇನ್ ನ ಪ್ರತಿದಾಳಿ ನಡೆಸುವಂತಿಲ್ಲ. ಆಗ ತನ್ನ ಸೇನೆಯನ್ನು ಸಜ್ಜುಗೊಳಿಸಲು ಸಮಯಾವಕಾಶ ದೊರಕಲಿದೆ ಎಂಬುದು ರಶ್ಯದ ಯೋಜನೆಯಾಗಿದೆ ಎಂದು ಉಕ್ರೇನ್ ಹೇಳಿದೆ.

ಝಪೋರಿಝಿಯಾ ಸ್ಥಾವರದಲ್ಲಿ ಶನಿವಾರ ನಿಗದಿಯಾಗಿದ್ದ ಅಂತರಾಷ್ಟ್ರೀಯ ಪರಮಾಣು ಶಕ್ತಿ ನಿಗಾ ಏಜೆನ್ಸಿ(IAEA)ಯ ಸಿಬಂದಿಯ ಕಾರ್ಯನಿರ್ವಹಣೆಗೆ ರಶ್ಯ ಅಡ್ಡಿಯಾಗಿದೆ ಎಂದೂ ಉಕ್ರೇನ್ ಆರೋಪಿಸಿದೆ. ಈ ಮಧ್ಯೆ, ಪರಮಾಣು ವಿಕಿರಣ ಸೋರಿಕೆಯ ಯಾವುದೇ ಲಕ್ಷಣ ತೋರಿಬಂದಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.

Similar News