ಅಮೆರಿಕದಲ್ಲಿ ಶೂಟೌಟ್: 3 ಮಂದಿ ಮೃತ್ಯು

Update: 2023-05-28 18:06 GMT

ವಾಷಿಂಗ್ಟನ್: ಅಮೆರಿಕದ ನ್ಯೂಮೆಕ್ಸಿಕೋ ರಾಜ್ಯದಲ್ಲಿ ಶನಿವಾರ ಬೈಕ್ರ್ಯಾಲಿ ಸಂದರ್ಭ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಟ 3 ಮಂದಿ ಮೃತಪಟ್ಟು ಇತರ 5 ಮಂದಿ ಗಾಯಗೊಂಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ನ್ಯೂಮೆಕ್ಸಿಕೋದ ರೆಡ್ ರಿವರ್ ನಗರದಲ್ಲಿ ಶನಿವಾರ ನಡೆದ ರ್ಯಾಲಿಯಲ್ಲಿ ಸುಮಾರು 20,000 ಬೈಕ್ ಸವಾರರು ಪಾಲ್ಗೊಂಡಿದ್ದರು. ಸ್ಥಳೀಯ ಕಾಲಮಾನ ಸಂಜೆ 5 ಗಂಟೆಯ ವೇಳೆ ಪ್ರೇಕ್ಷಕರ ಗುಂಪಿನಲ್ಲಿ ಏಕಾಏಕಿ ಗದ್ದಲ ಕಾಣಿಸಿಕೊಂಡಿದ್ದು  ಜನ ಗಾಭರಿಗೊಂಡು ಓಡಿದ್ದಾರೆ. ಅಷ್ಟರಲ್ಲಿ ಗುಂಡು ಹಾರಿಸಿದ ಸದ್ದೂ ಕೇಳಿಬಂದಿದೆ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

ಗುಂಡಿನ ದಾಳಿಯಲ್ಲಿ 3 ಮಂದಿ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಹಲವು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ನಗರದ ಮೇಯರ್ ಲಿಂಡಾ ಕಲ್ಹಾನ್ ಹೇಳಿದ್ದಾರೆ.

Similar News