ರಶ್ಯ ಕುರಿತ ಹೇಳಿಕೆ : ಅಮೆರಿಕ ಸೆನೆಟರ್ ವಿರುದ್ಧ ಬಂಧನ ವಾರಂಟ್

Update: 2023-05-29 17:14 GMT

ಮಾಸ್ಕೋ: ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿ ಹೇಳಿಕೆ ನೀಡಿರುವ ಅಮೆರಿಕದ ಸೆನೆಟರ್ ಲಿಂಡ್ಸೆ ಗ್ರಹಾಂ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿರುವುದಾಗಿ ರಶ್ಯ ಹೇಳಿದೆ.

ಉಕ್ರೇನ್ಗೆ ಭೇಟಿ ನೀಡಿ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿಯನ್ನು ಭೇಟಿ ಮಾಡಿದ ವೀಡಿಯೊವನ್ನು  ಗ್ರಹಾಂ  ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದರು. `ರಶ್ಯನ್ನರು ಸಾಯುತ್ತಿದ್ದಾರೆ. ಉಕ್ರೇನ್ಗೆ ನಮ್ಮ ಮಿಲಿಟರಿ ನೆರವು ನಾವು ಇದುವರೆಗೆ  ಖರ್ಚು ಮಾಡಿದ್ದರಲ್ಲಿ ಅತ್ಯುತ್ತಮವಾಗಿದೆ' ಎಂದು ವೀಡಿಯೊದ ಜತೆ ಟ್ವೀಟ್ ಮಾಡಿದ್ದರು. ಈ ವೀಡಿಯೊ ಮತ್ತು ಜತೆಗಿನ ಟ್ವೀಟ್ ಪ್ರತ್ಯೇಕ ಸಂದರ್ಭಕ್ಕೆ ಸಂಬಂಧಿಸಿದ್ದರೂ ಇವೆರಡನ್ನೂ ಉಕ್ರೇನ್ ಅಧ್ಯಕ್ಷರ ಕಚೇರಿ ಎಡಿಟ್ ಮಾಡಿ ಜತೆಗೇ ಪ್ರಸಾರ ಮಾಡಿದೆ ಎಂದು ವರದಿಯಾಗಿದೆ.

ಈ ವೀಡಿಯೊಗೆ ಸಂಬಂಧಿಸಿ ರಶ್ಯದ ತನಿಖಾ ಸಮಿತಿ ಲಿಂಡ್ಸೆ ಗ್ರಹಾಂ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧನಕ್ಕೆ ವಾರಂಟ್ ಜಾರಿಗೊಳಿಸಿದೆ ಎಂದು ರಶ್ಯದ ಅಧಿಕಾರಿಗಳು ಹೇಳಿದ್ದಾರೆ.

Similar News