ಮುಡಾ ಅಧ್ಯಕ್ಷರಾಗಿ ದ.ಕ. ಜಿಲ್ಲಾಧಿಕಾರಿ ರವಿಕುಮಾರ್‌ ಅಧಿಕಾರ ಸ್ವೀಕಾರ

Update: 2023-05-30 14:35 GMT

ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ದ.ಕ. ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್ ಅಧಿಕಾರ ವಹಿಸಿಕೊಂಡಿರುತ್ತಾರೆ.

ಹಾಗಾಗಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಕೆಲಸ ಕಾರ್ಯಗಳಿಗೆ ಸಂಬಂಧಪಟ್ಟ ಹಾಗೂ ವೈಯಕ್ತಿಕ ಗಮನಕ್ಕೆ ತರುವಂತಹ ಪತ್ರಗಳು, ಅರೆ ಸರಕಾರಿ ಪತ್ರಗಳು, ರಹಸ್ಯ ಪತ್ರಗಳನ್ನು ಅಧ್ಯಕ್ಷರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಉರ್ವಸ್ಟೋರ್, ಅಂಚೆ: ಅಶೋಕ್ ನಗರ,ಮಂಗಳೂರು -575006 ಈ ವಿಳಾಸಕ್ಕೆ ಕಳುಹಿಸುವಂತೆ ಪ್ರಕಟನೆ ತಿಳಿಸಿದೆ.

Similar News