ಯುವತಿ ನಾಪತ್ತೆ: ಪತ್ತೆಗೆ ಕೋರಿಕೆ

Update: 2023-05-31 14:50 GMT

ಮಂಗಳೂರು, ಮೇ 31: ಶ್ವೇತಾ (24) ಎಂವಬರು ಎ.24ರಿಂದ ಕಾಣೆಯಾಗಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಹರೆ: ಎತ್ತರ 4.5 ಅಡಿ, ಎಣ್ಣೆ ಕಪ್ಪು ಮೈ ಬಣ್ಣ, ದೃಢಕಾಯ ಶರೀರ ಹೊಂದಿರುವ ಇವರು ಕಾಣೆಯಾದ ದಿನ ಹಸಿರು ಬಣ್ಣದ ಚೂಡಿದಾರ ಟಾಪ್ ಹಾಗೂ ಪಿಂಕ್ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಕನ್ನಡ ಹಾಗೂ ತುಳು ಮಾತನಾಡುತ್ತಾರೆ.

ಇವರು ಪತ್ತೆಯಾದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯ ದೂ.ಸಂಖ್ಯೆ: 08251-251055, ಜಿಲ್ಲಾ ವಿಭಾಗದ ದೂ.ಸಂಖ್ಯೆ: 0824-2220500ಗೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News