×
Ad

​ಜೂನ್ 19ರವರೆಗೆ ಇಮ್ರಾನ್ ಗೆ ಜಾಮೀನು

Update: 2023-05-31 23:28 IST

ಇಸ್ಲಮಾಬಾದ್: ಕಾದಿರ್ ಟ್ರಸ್ಟ್ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯ ಜೂನ್ 19ರವರೆಗೆ ಜಾಮೀನು ಮಂಜೂರುಗೊಳಿಸಿದೆ.

ಇದಕ್ಕೂ ಮುನ್ನ ಇಮ್ರಾನ್, ಜಾಮೀನು ಅವಧಿ ವಿಸ್ತರಿಸುವಂತೆ ಕೋರಿ ಇಸ್ಲಮಾಬಾದ್  ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಕೋರ್ಟ್‌ಗೆ ಹಾಜರಾಗಿದ್ದರು. ಜಾಮೀನು ಅವಧಿ 3 ದಿನ ವಿಸ್ತರಿಸಿದ ನ್ಯಾಯಾಲಯ, ಭ್ರಷ್ಟಾಚಾರ ನಿಗ್ರಹ ದಳದ ಎದುರು ಹಾಜರಾಗಿ ಜಾಮೀನು ಪಡೆಯುವಂತೆ ಸಲಹೆ ನೀಡಿತ್ತು. ಅದರಂತೆ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದಲ್ಲಿ ಇಮ್ರಾನ್ ಹಾಜರಾಗಿದ್ದರು

Similar News