ರಶ್ಯ ನಿಯಂತ್ರಣದ ಪ್ರದೇಶದಲ್ಲಿ ಉಕ್ರೇನ್ ದಾಳಿ; 5 ಮಂದಿ ಮೃತ್ಯು

Update: 2023-05-31 18:03 GMT

ಮಾಸ್ಕೋ: ಪೂರ್ವ ಜನನ ಉಕ್ರೇನ್ನಲ್ಲಿ ರಶ್ಯದ ನಿಯಂತ್ರಣದಲ್ಲಿರುವ ಲುಹಾಂಸ್ಕ್ ವಲಯದ ಗ್ರಾಮವೊಂದರ ಮೇಲೆ ಉಕ್ರೇನ್ ನಡೆಸಿದ ದಾಳಿಯಲ್ಲಿ 5 ಮಂದಿ ಮೃತಪಟ್ಟಿದ್ದು ಇತರ 19 ಮಂದಿ ಗಾಯಗೊಂಡಿರುವುದಾಗಿ ಈ ಪ್ರದೇಶದಲ್ಲಿ ರಶ್ಯ ನೇಮಿಸಿರುವ ಸಮನ್ವಯ ಕೇಂದ್ರ ಬುಧವಾರ  ವರದಿ ಮಾಡಿದೆ.

ಕರ್ಪಾಟಿ ಎಂಬ ಗ್ರಾಮದಲ್ಲಿ ಕೋಳಿಸಾಕಣೆ ಕೇಂದ್ರದ ಮೇಲೆ ‘ಹಿಮರ್ಸ್’ ರಾಕೆಟ್ ಲಾಂಚರ್ಗಳನ್ನು ಬಳಸಿ ಉಕ್ರೇನ್ ಪಡೆ ದಾಳಿ ನಡೆಸಿದೆ ಎಂದು ವರದಿ ಹೇಳಿದೆ. ಈ ಬಗ್ಗೆ ಉಕ್ರೇನ್ ಪ್ರತಿಕ್ರಿಯಿಸಲು ನಿರಾಕರಿಸಿದೆ ಎಂದು ‘ರಾಯ್ಟರ್ಸ್’ ವರದಿ ಮಾಡಿದೆ.

ಈ ಮಧ್ಯೆ, ಉಕ್ರೇನ್ ಗಡಿಯ ಬಳಿಯಿರುವ ಬೆಲ್ಗೊರೊಡ್ ಪ್ರದೇಶದ ಮೇಲೆ ಮಂಗಳವಾರ ಉಕ್ರೇನ್ ಪಡೆ ನಡೆಸಿದ ಬಾಂಬ್ದಾಳಿಯಲ್ಲಿ ಕನಿಷ್ಟ ಒಬ್ಬ ಮೃತಪಟ್ಟಿದ್ದು ಇತರ ಇಬ್ಬರು ಗಂಭೀರ ಗಾಯಗೊಂಡಿರುವುದಾಗಿ ನಗರದ ಗವರ್ನರ್ ವ್ಯಚೆಸ್ಲಾವ್ ಗ್ಲ್ಯಾಡ್ಕೋವ್ ಹೇಳಿದ್ದಾರೆ. ರಶ್ಯ ರಾಜಧಾನಿ ಮಾಸ್ಕೋದ ಮೇಲೆ ಮಂಗಳವಾರ ಬೆಳಿಗ್ಗೆ ಡ್ರೋನ್ ಬಳಸಿ ದಾಳಿ ನಡೆಸುವ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ರಶ್ಯದ ಮಾಧ್ಯಮಗಳು ವರದಿ ಮಾಡಿವೆ.

Similar News