ಅಪರೂಪದ ಬಿಳಿ ಪಾಂಡಾ ಚೀನಾ ಅಭಯಾರಣ್ಯದಲ್ಲಿ ಪತ್ತೆ

Update: 2023-06-01 17:15 GMT

ಬೀಜಿಂಗ್: ಸಂಪೂರ್ಣ ಬಿಳಿಬಣ್ಣ ಹೊಂದಿರುವ ಅತ್ಯಪೂರ್ವ ಪಾಂಡಾವನ್ನು ಇತ್ತೀಚೆಗೆ ಚೀನಾದ ವೊಲೋಂಗ್ ರಾಷ್ಟ್ರೀಯ ಅಭಯಾರಣ್ಯದಲ್ಲಿ ಪತ್ತೆಹಚ್ಚಲಾಗಿದೆ ಎಂದು `ಸೌತ್ ಚೀನಾ ಮಾರ್ನಿಂಗ್ ಪೋಸ್ಟ್' ವರದಿ ಮಾಡಿದೆ.

ವಿಶ್ವದಲ್ಲಿ ಬದುಕಿರುವ ಏಕೈಕ ಬಿಳಿಬಣ್ಣದ ಪಾಂಡಾವು ಸುಮಾರು 6 ವರ್ಷ ಪ್ರಾಯದ್ದಾಗಿದ್ದು ಅತ್ಯಂತ ಆರೋಗ್ಯವಾಗಿದೆ.

2019ರ ಎಪ್ರಿಲ್ನಲ್ಲಿ ಈ ಅಪರೂಪದ ಜೀವಿ ಅಭಯಾರಣ್ಯದಲ್ಲಿ ಇರಿಸಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಬಳಿಕ ಇದರ ಪತ್ತೆಗಾಗಿ ನಿರಂತರ ಹುಡುಕಾಟ ನಡೆದಿತ್ತು. ಇದೀಗ ಸಿಸಿಟಿವಿ ದೃಶ್ಯಾವಳಿಯಲ್ಲಿ ಈ ಅಪರೂಪದ ಪಾಂಡಾ ಮತ್ತೆ ಕಾಣಿಸಿಕೊಂಡಿದ್ದು ಇದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Similar News