ಇಮ್ರಾನ್ ರನ್ನು ಟಿವಿಗಳಲ್ಲಿ ತೋರಿಸಬೇಡಿ: ಪಾಕ್ ಮಾಧ್ಯಮಗಳಿಗೆ ಸೂಚನೆ
Update: 2023-06-03 23:39 IST
ಇಸ್ಲಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಸಂಬಂಧಿಸಿದ ಯಾವುದೇ ಸುದ್ಧಿಗಳನ್ನು ವರದಿ ಮಾಡಬಾರದು ಮತ್ತು ಅವುಗಳನ್ನು ಟಿವಿಯಲ್ಲಿ ಪ್ರಸಾರ ಮಾಡಬಾರದು ಎಂದು ಪಾಕಿಸ್ತಾನದ ಸೇನೆ ದೇಶದ ಪ್ರಮುಖ ಮಾಧ್ಯಮ ಸಂಸ್ಥೆಗಳಿಗೆ ಸೂಚಿಸಿರುವುದಾಗಿ ವರದಿಯಾಗಿದೆ.
ಇತ್ತೀಚೆಗೆ ದೇಶದ ಪ್ರಮುಖ ಮಾಧ್ಯಮ ಸಂಘಟನೆಗಳ ಮಾಲಕರ ಸಭೆ ಕರೆದಿದ್ದ ಪಾಕಿಸ್ತಾನದ ಮಿಲಿಟರಿ, ಇಮ್ರಾನ್ ಗೆ ಸಂಬಂಧಿಸಿದ ವರದಿ, ಸುದ್ಧಿಗಳನ್ನು ಟಿವಿಯಲ್ಲಿ ಪ್ರಸಾರ ಮಾಡುವುದನ್ನು ನಿಷೇಧಿಸಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್ರ ಬಂಧನವಾದ ಬಳಿಕವೂ ಅವರ ಜನಪ್ರಿಯತೆಗೆ ಯಾವುದೇ ಧಕ್ಕೆಯಾಗಿಲ್ಲ ಎಂಬುದನ್ನು ಮನಗಂಡಿರುವ ಸೇನೆ ಈ ಆದೇಶ ಜಾರಿಗೊಳಿಸಿದೆ ಎಂದು ವರದಿಯಾಗಿದೆ.