ಅಂತಾರಾಷ್ಟ್ರೀಯ ದೈಹಿಕ ಶಿಕ್ಷಣ, ಕ್ರೀಡಾ ವಿಜ್ಞಾನ ಸಮ್ಮೇಳನದ ವೆಬ್‌ಸೈಟ್‌ಗೆ ಚಾಲನೆ

Update: 2023-06-04 15:09 GMT

ಮಣಿಪಾಲ, ಜೂ.4: ಮಣಿಪಾಲ ಮಾಹೆಯು ರಾಷ್ಟ್ರೀಯ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನಗಳ ಸಂಘದ ಸಹಯೋಗದೊಂದಿಗೆ ಡಿಸೆಂಬರ್ 14 ರಿಂದ 16 ರವರೆಗೆ ಹಮ್ಮಿಕೊಳ್ಳಲಾದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನದ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನದ ವೆಬ್‌ಸೈಟ್‌ಗೆ ಚಾಲನೆ ನೀಡುವ ಕಾರ್ಯಕ್ರಮವು ರವಿವಾರ ಮಾಹೆಯ ಬೋರ್ಡ್ ರೂಮ್‌ನಲ್ಲಿ  ನಡೆಯಿತು.

ಸಮ್ಮೇಳನದ ವೆಬ್‌ಸೈಟ್‌ಗೆ ಚಾಲನೆ ನೀಡಿದ ಮಾಹೆ ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ. ವೆಂಕಟೇಶ್ ಮಾತನಾಡಿ, ಸಮ್ಮೇಳನವು ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನದಲ್ಲಿ ಪರಿಣಿತರಿಗೆ ಜ್ಞಾನ ವಿನಿಮಯಕ್ಕಾಗಿ ವೇದಿಕೆಯನ್ನು ನೀಡುವ ಗುರಿಯನ್ನು ಹೊಂದಿದೆ ಮತ್ತು ಇತ್ತೀಚಿನ ತಾಂತ್ರಿಕ ಪ್ರಗತಿಗಳು, ತಂತ್ರಗಳು ಮತ್ತು ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನದಲ್ಲಿನ ಪರಿಹಾರಗಳಲ್ಲಿ ಅತ್ಯಾಧುನಿಕ ತಿಳುವಳಿಕೆಯನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದರು.

ಮಾಹೆ ಸಹ ಉಪ ಕುಲಪತಿ ಡಾ.ಶರತ್ ಕೆ.ರಾವ್ ಸಮ್ಮೇಳನದ ಪೋಸ್ಟರ್ ಬಿಡುಗಡೆ ಮಾಡಿದರು. ಮಾಹೆ ಕುಲಸಚಿವ ಡಾ.ಗಿರಿಧರ್ ಕಿಣಿ, ರಾಷ್ಟ್ರೀಯ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನಗಳ ಸಂಘದ ಮುಖ್ಯ ಪೋಷಕ ಡಾ.ಪಿ.ಚಿನ್ನಪ್ಪ ರೆಡ್ಡಿ, ಅಧ್ಯಕ್ಷ ಡಾ.ಅನಿಲ್ ದೇಶಮುಖ್, ಸಮ್ಮೇಳನದ ಸಂಚಾಲಕ ಡಾ.ವಿನೋದ್ ಸಿ ನಾಯಕ್, ಸಂಘಟನಾ ಕಾರ್ಯದರ್ಶಿ ಡಾ.ದೀಪಕ್ ರಾಮ್ ಬೈರಿ ಉಪಸ್ಥಿತರಿದ್ದರು.

Similar News