ತ್ರಿಶೂರ್:‌ ಮಲಯಾಳಂ ಚಿತ್ರರಂಗದ ನಟ ಕೊಲ್ಲಂ ಸುಧಿ ಅಪಘಾತದಲ್ಲಿ ನಿಧನ

Update: 2023-06-05 08:18 GMT

ತ್ರಿಶೂರ್:‌ ಹಾಸ್ಯ ನಟ ಹಾಗೂ ಮಿಮಿಕ್ರಿ ಕಲಾವಿದನಾಗಿದ್ದ ಕೊಲ್ಲಂ ಸುಧಿ ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅವರು ಪ್ರಯಾಣಿಸುತ್ತಿದ್ದ ಕಾರಿಗೆ ವಾಹನವೊಂದು ಢಿಕ್ಕಿಯಾಗಿದ್ದು, ಸುಧಿ ಸ್ಥಳದಲ್ಲೇ ಮೃತಪಟ್ಟರೆ, ಇನ್ನಿತರ ಸಹಪ್ರಯಾಣಿಕರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. 

ಕೈಪಮಂಗಲಂ ಸಮೀಪ ಇಂದು ಬೆಳಗ್ಗೆ 4:30 ವೇಳೆಗೆ ಅಪಘಾತ ಸಂಭವಿಸಿದೆ. ಕೊಲ್ಲಂ ಸುಧಿ ಸ್ಟಾರ್‌ ಮ್ಯಾಜಿಕ್‌ ಕಾರ್ಯಕ್ರಮದ ಮೂಲಕ ಕೇರಳ, ಕರ್ನಾಟಕದಲ್ಲಿ ಜನಪ್ರಿಯರಾಗಿದ್ದರು. ಕಾರ್ಯಕ್ರಮವೊಂದು ಕಳೆದು ಅವರು ಮನೆಗೆ ಹಿಂದಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಇತರ ನಟರಾದ ಬಿನು ಅಡಿಮಾಲಿ, ಉಲ್ಲಾಸ್‌ ಪಂದಲಂ ಹಾಗೂ ಮಹೇಶ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

Similar News