×
Ad

ಮಲ್ಪೆ: ಅಮನುತಿ ಇಲ್ಲದೆ ಫ್ಲೆಕ್ಸ್ ಅಳವಡಿಕೆ; ಪ್ರಕರಣ ದಾಖಲು

Update: 2023-06-05 21:20 IST

ಮಲ್ಪೆ, ಜೂ.5: ಅನುಮತಿ ಪಡೆಯದೆ ಅಕ್ರಮವಾಗಿ ಪಡುಕೆರೆ ಮುಖ್ಯ ರಸ್ತೆಯ ಸೇತುವೆ ಮುಂಭಾಗದಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಸಹಿತ ಶುಭಕೋರಿ ಅಳವಡಿಸಿದ್ದ ಮೂರು ಫ್ಲೆಕ್ಸ್ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡು ಫ್ಲೆಕ್ಸ್‌ನಲ್ಲಿ ಯಶಪಾಲ್ ಸುವರ್ಣರಿಗೆ ಅಭಿನಂದನೆಗಳು, ಶುಭ ಕೋರುವವರು ಕುತ್ಪಾಡಿ ಕಡೆಕಾರ್ ಬಿಜೆಪಿ ಕಾರ್ಯಕರ್ತರು ಪಡುಕೆರೆ ಮತ್ತು ಇನ್ನೊಂದು ಫ್ಲೆಕ್ಸ್‌ನಲ್ಲಿ ಮಾರುತಿ ಪ್ರೆಂಡ್ಸ್ ಪಡುಕೆರೆ ಎಂಬುದಾಗಿ ಬರೆಯ ಲಾಗಿತ್ತು. ಮೂರನೇ ಬ್ಯಾನರ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಅವರಿಗೆ ಶುಭ ಕೋರಲಾಗಿತ್ತು. ಈ ಹಿಂದೆ ಇದೆ ಸ್ಥಳದಲ್ಲಿ ಅನುಮತಿ ಇಲ್ಲದೆ ಅಳವಡಿಸಿದ ಫ್ಲೆಕ್ಸ್‌ಗೆ ಹಾನಿ ಎಸಗಿರುವ ಬಗ್ಗೆ ವಿವಾದ ಉಂಟಾಗಿತ್ತು.  

Similar News