ಮಣಿಪುರದಲ್ಲಿ ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧ ಜೂ.10ರ ತನಕ ವಿಸ್ತರಣೆ

Update: 2023-06-06 04:38 GMT

ಹೊಸದಿಲ್ಲಿ: ಹಿಂಸಾಚಾರ ಪೀಡಿತ ರಾಜ್ಯದಲ್ಲಿ ಹೆಚ್ಚಿನ ಗೊಂದಲವನ್ನು ತಡೆಗಟ್ಟಲು ಮಣಿಪುರ ಸರಕಾರವು ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧವನ್ನು ಜೂನ್ 10 ರವರೆಗೆ ವಿಸ್ತರಿಸಿದೆ. ಮೇ 3ರಂದು ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

ಇನ್ನು ಐದು ದಿನಗಳ ಕಾಲ ಅಂದರೆ ಜೂನ್ 10ರ ಮಧ್ಯಾಹ್ನ 3 ಗಂಟೆಯವರೆಗೆ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ರಾಜ್ಯ ಸರಕಾರ ಸೋಮವಾರ ಸಂಜೆ ಆದೇಶದಲ್ಲಿ ತಿಳಿಸಿದೆ.

ಇಂಫಾಲ್ ಕಣಿವೆಯಲ್ಲಿ ಹಾಗೂ  ಸುತ್ತಮುತ್ತ ವಾಸಿಸುವ ಮೈತೈಗಳು ಮತ್ತು ಬೆಟ್ಟಗಳಲ್ಲಿ ನೆಲೆಸಿರುವ ಕುಕಿ ಬುಡಕಟ್ಟು ಜನಾಂಗದವರ ನಡುವೆ ಮುಂದುವರಿದ ಜನಾಂಗೀಯ ಹಿಂಸಾಚಾರವು   70 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಮೇ 3 ರಂದು ಘರ್ಷಣೆ ಆರಂಭವಾಯಿತು.

ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆಗಾಗಿ ಸುಮಾರು 10,000 ಸೇನೆ ಮತ್ತು ಅಸ್ಸಾಂ ರೈಫಲ್ಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಕಳೆದ ವಾರ ತಮ್ಮ ಭೇಟಿಯ ಸಂದರ್ಭದಲ್ಲಿ, ಗೃಹ ಸಚಿವ ಅಮಿತ್ ಶಾ ಅವರು ಮೈತೀಸ್ ಮತ್ತು ಕುಕಿಗಳು ಶಾಂತಿಯನ್ನು ಕಾಪಾಡಿಕೊಳ್ಳಲು ಮತ್ತು ಸಹಜತೆಯನ್ನು ತರಲು ಕೆಲಸ ಮಾಡಲು ಮನವಿ ಮಾಡಿದ್ದರು

Similar News