ಉಡುಪಿ ನಗರದಲ್ಲಿ ಸಮರ್ಪಕ ಸಿಸಿಟಿವಿ ವ್ಯವಸ್ಥೆಗೆ ಆಗ್ರಹ

Update: 2023-06-09 15:33 GMT

ಉಡುಪಿ : ಪ್ರಸಿದ್ಧ ಪ್ರವಾಸಿ ತಾಣ, ಧಾರ್ಮಿಕ ತೀರ್ಥಕ್ಷೇತ್ರ ಹಾಗೂ ಸೂಕ್ಷ್ಮ ಪ್ರದೇಶವಾಗಿರುವ ಉಡುಪಿ ನಗರ ದೊಳಗೆ ಕಳೆದ ಒಂದು- ಒಂದೂವರೆ ವರ್ಷದಿಂದ ಯಾವುದೇ ಸಿಸಿಟಿವಿ ಸಮರ್ಪಕವಾಗಿ ಕಾರ್ಯ ನಿರ್ವಹಿಸು ತ್ತಿಲ್ಲ. ತಕ್ಷಣವೇ ಸಂಬಂಧಿತರು ಸಮರ್ಪಕ ಸಿಸಿಟಿವಿ ವ್ಯವಸ್ಥೆಯನ್ನು  ಅಳವಡಿಸಬೇಕು ಎಂದು ಸಮಾಜಿಕ ಕಾರ್ಯಕರ್ತರಾದ ಪ್ರಖ್ಯಾತ್ ಶೆಟ್ಟಿ ತಿಳಿಸಿದ್ದಾರೆ.

ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ನಗರ ಹಾಗೂ ಜಿಲ್ಲೆಗೆ ಸಾವಿರಾರು ಮಂದಿ ಪ್ರತಿದಿನ ದೇಶ ಹಾಗೂ ವಿದೇಶಗಳಿಂದ ವಿವಿಧ ಕಾರಣಗಳಿಗಾಗಿ ಆಗಮಿಸುತಿದ್ದಾರೆ. ನಗರದ ಪ್ರಮುಖ ತಾಣಗಳಲ್ಲಿ ಜನಗಳ ಮೇಲೆ ನಿಗಾ ಇರಿಸಲು ಸಿಸಿಟಿವಿ ವ್ಯವಸ್ಥೆ   ಎಲ್ಲಾ ಕಡೆ ಇರುತ್ತದೆ. ವಿವಿಧ ಸಂದರ್ಭಗಳಲ್ಲಿ ಇವುಗಳೇ ಹಲವು ಘಟನೆ ಗಳಿಗೆ ಸಾಕ್ಷಿಯನ್ನು ಒದಗಿಸುತ್ತವೆ ಎಂದರು.

ಆದರೆ ಕಳೆದ ಒಂದೂವರೆ ವರ್ಷದಿಂದ ಉಡುಪಿ ನಗರದಲ್ಲಿರುವ ಯಾವುದೇ ಸಿಸಿಟಿವಿ ಕಾರ್ಯಾಚರಿಸುತ್ತಿಲ್ಲ. ಇದರಿಂದ ಕಳ್ಳತನ, ಅತ್ಯಾಚಾರ, ಕೊಲೆ, ದರೋಡೆ, ಸರಗಳ್ಳರು, ಮೊಬೈಲ್ ಕಳ್ಳರು ಹಾಗೂ ಇತರ ಅನೇಕ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯಲು ಹಾಗೂ ಅವುಗಳ ಪತ್ತೆಗೆ ಸಿಸಿಟಿವಿ ಪ್ರಮುಖ ಪಾತ್ರ ವಹಿಸು ತ್ತವೆ. ಉಡುಪಿಯಲ್ಲಿ ಅವುಗಳ ಕೊರತೆಯಿಂದ ಜಿಲ್ಲೆಯ ಪೊಲೀಸರಿಗೆ ಹಿನ್ನಡೆಯಾಗಿದೆ ಎಂದವರು ತಿಳಿಸಿದರು.

ಆದುದರಿಂದ ಕೂಡಲೇ ಸಂಬಂಧಿತರು ನಗರದ ಪ್ರಮುಖ ವೃತ್ತ, ಪ್ರದೇಶಗಳಲ್ಲಿ ಅತ್ಯುತ್ತಮ ಗುಣಮಟ್ಟದ ಸಿಸಿಟಿವಿಗಳನ್ನು ಅಳವಡಿಸುವ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ನಗರಸಭಾ ಅಧಿಕಾರಿಗಳಿಗೆ ಮನವಿ ಅರ್ಪಿಸಲಾಗುವುದು ಎಂದವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಯತೀಶ್ ಕರ್ಕೇರ, ಪ್ರದೀಪ್ ಸಾಮ್ಯುವೆಲ್, ಸದಾಶಿವ ಕೆ., ಅಬೂಬಕ್ಕರ್ ಕಾಸಿಂ ಉಪಸ್ಥಿತರಿದ್ದರು.

Similar News